Friday, January 2, 2026

ಮತ್ತೆ ವಿದೇಶದತ್ತ ಹೊರಟ ರಾಹುಲ್ ಗಾಂಧಿ: ಈ ಬಾರಿ ಯಾವ ಕಡೆಗೆ ಪಯಣ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜರ್ಮನಿ ಪ್ರವಾಸವನ್ನು ಮುಗಿಸಿ ಹಿಂತಿರುಗಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.

ಶುಕ್ರವಾರ ಜನವರಿ 2, 2026ರಂದು ರಾಹುಲ್ ಗಾಂಧಿ ಮತ್ತೊಮ್ಮೆ ವಿಯೆಟ್ನಾಂಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ರಾಹುಲ್ ಗಾಂಧಿಯ ನಿರಂತರ ವಿದೇಶ ಪ್ರವಾಸಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.

ಅವರ ಪ್ರವಾಸದ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಇದು ಬಹಳ ಖಾಸಗಿ ಪ್ರವಾಸ ಎಂದು ಹೇಳಲಾಗುತ್ತಿದೆ. ಸಹೋದರಿಯ ಪುತ್ರ, ತನ್ನ ಅಳಿಯನ ವಿವಾಹ ಮಾತುಕತೆ ಹಿನ್ನೆಲೆಯಲ್ಲಿ ಕ್ಯಾನ್ಸಲ್ ಆಗಿದ್ದ ವಿದೇಶ ಪ್ರವಾಸ ಮತ್ತೆ ಮುಂದುವರೆದಿದೆ.

ಕಳೆದ ವರ್ಷ 22 ದಿನ ವಿಯೆಟ್ನಾಂ ನಲ್ಲಿ ಇದ್ದ ಅವರು ಈ ಬಾರಿ ಎಷ್ಟು ದಿನಗಳ ಕಾಲ ತಂಗಲಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಸೋಷಿಯಲ್‌ ಮೀಡಿಯಾದಲ್ಲಿ ತರಹೇವಾರಿ ಕಮೆಂಟ್‌ಗಳು ಬರುತ್ತಿದೆ. ರಾಹುಲ್ ಗಾಂಧಿಯ ವಿದೇಶ ಪ್ರವಾಸದ ಮೋಹದ ಬಗ್ಗೆ ಪ್ರಶ್ನಿಸಲಾಗುತ್ತಿದೆ. ಜೊತೆಗೆ ಜನಪ್ರತಿನಿಧಿಗಳೆಂದರೆ ಕೇಳುವವರೇ ಇಲ್ವಾ ಎಂದು ಪ್ರಶ್ನೆಸಲಾಗುತ್ತಿದೆ.

error: Content is protected !!