ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರದ ಮಧ್ಯಂತರ ಬಜೆಟ್ ವಿಕಸಿತ-ಪ್ರಗತಿಶೀಲ ಭಾರತದ ಬಜೆಟ್ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಶ್ಲಾಘಿಸಿದ್ದಾರೆ.
ಮುಂದಿನ 5 ವರ್ಷಗಳಲ್ಲಿ 2 ಕೋಟಿ ಮನೆಗಳನ್ನು ಬಡವರಿಗೆ ಒದಗಿಸುವ ಗುರಿಯೇ ‘ಮೋದಿ ಸರ್ಕಾರದ ಗ್ಯಾರಂಟಿ’ ಎಂದು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) 3 ಕೋಟಿ ಮನೆಗಳ ಹಂಚಿಕೆ ಗುರಿ ಸಾಧನೆ ಸಮೀಪದಲ್ಲಿದ್ದು, ಮುಂದಿನ 5 ವರ್ಷಗಳಲ್ಲಿ ಹೆಚ್ಚುವರಿ 2 ಕೋಟಿ ಮನೆಗಳ ಹಂಚಿಕೆ ಗುರಿ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ.
ಬಜೆಟ್ ಶ್ರೀಸಾಮಾನ್ಯರ ಪರವಾಗಿದೆ. ವಿಕಸಿತ-ಪ್ರಗತಿಶೀಲ ಭಾರತಕ್ಕೆ ಪೂರಕ ಬಜೆಟ್. 7 ಲಕ್ಷ ರೂ. ಆದಾಯ ಇರುವ ಮದ್ಯಮ ವರ್ಗಕ್ಕೆ ತೆರಿಗೆ ವಿನಾಯಿತಿ ಕೊಟ್ಟು ಬಹು ದೊಡ್ಡ ಕೊಡುಗೆ ನೀಡಿದ್ದಾರೆ. 1 ಕೋಟಿ ಮನೆಗಳಿಗೆ ಸೋಲಾರ್ ವಿದ್ಯುತ್, ಕಾರ್ಪೋರೇಟ್ ಟ್ಯಾಕ್ಸ್ ಶೇ.22ಕ್ಕೆ ಇಳಿಕೆ, ವಿಮಾನ ನಿಲ್ದಾಣ, ವಿಮಾನಗಳ ಸಂಖ್ಯೆ ಹೆಚ್ಚಳ, ಪ್ರವಾಸೋದ್ಯಮ ಅಭಿವೃದ್ಧಿ, ರೈಲ್ವೆ ಸೌಲಭ್ಯ ಹೀಗೆ ಸಮತೋಲಿತ ಬಜೆಟ್ ಇದಾಗಿದೆ. ಸರ್ವ ವರ್ಗದ ಅಗತ್ಯ ಆಶೋತ್ತರಗಳಿಗೆ ಸ್ಪಂದಿಸಿ, ಲೋಕಸಭಾ ಚುನಾವಣೆಗೂ ಮುನ್ನ ಪ್ರಗತಿಶೀಲ ಭಾರತಕ್ಕೆ ಪೂರಕವಾದ ಬಜೆಟ್ ಮಂಡಿಸಲಾಗಿದೆ ಎಂದು ಹೇಳಿದ್ದಾರೆ.