ಹೊಸದಿಗಂತ ವರದಿ ಬಾಗಲಕೋಟೆ :
ಕಾಂಗ್ರೆಸ್ ಪಕ್ಷ ತೋಡೋ ಪಾರ್ಟಿ ಬಿಜೆಪಿ ಜೋಡಣೆ ಮಾಡುವ ಪಕ್ಷವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅವರಿಗೆ ಬುದ್ದಿ ಭ್ರಮಣೆಯಾಗಿದೆ. ರಾಹುಲ್ ಗಾಂಧಿ ಅವರು ಭಾರತ ಜೋಡೋ ಎನ್ನುತ್ತಾರೆ ಆದರೆ ಕಾಂಗ್ರೆಸ್ ಪಕ್ಷದವರೇ ಆದ ಡಿ.ಕೆ. ಸುರೇಶ ಭಾರತ ತೋಡೋ ಎನ್ನುತ್ತಾರೆ. ಇವರಿಂದ ಭಾರತ ಜೋಡೋ ಆಗುವುದಿಲ್ಲ ಆದರೆ ಭಾರತ ಜೋಡೋ ನಮ್ಮ ಪ್ರಧಾನಿಯವರು ಮಾಡುತ್ತಿದ್ದಾರೆ. ಹಿಂದೂಸ್ಥಾನ ಪಾಕಿಸ್ತಾನ ನಿರ್ಮಾಣ ಮಾಡಿದವರೇ ಕಾಂಗ್ರೆಸ್ ಪಕ್ಷದವರು ಎಂದರು.
ಜಗದೀಶ ಶೆಟ್ಟರ ಬಂದ ನಂತರ ಇನ್ನೂ ಹಲವಾರು ನಾಯಕರು ಬಿಜೆಪಿಗೆ ಬರಲಿದ್ದಾರೆ. ಆಪರೇಶನ್ ಸರ್ಜರಿ ಏನೂ ಇಲ್ಲ ಅನೇಕರು ಬರಲಿದ್ದಾರೆ. ಬರುವವರಿಗೆ ಸ್ವಾಗತ ಮಾಡಲಿದ್ದೇವೆ ಎಂದರು. ಮಾಗಡಿ ಶಾಸಕ ಬಾಲಕೃಷ್ಣ ಅವರು ಗ್ಯಾರಂಟಿ ಯೋಜನೆ ಕೊಡುತ್ತಿದ್ದೇವೆ ಚುನಾವಣೆಯಲ್ಲಿ ಮತ ಹಾಕಿ ಎಂದು ಬೆದರಿಕೆ ಹಾಕುತ್ತಿದ್ದಾರೆ. ಜನರಿಗೆ ಬ್ಲ್ಯಾಕ್ ಮೇಲ್‌ಹಾಗೂ ಹೆದರಿಕೆಯನ್ನು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.