ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಚಿತ್ರರಂಗದ ನಟ ದಳಪತಿ ವಿಜಯ್ ಅವರು ಹೊಸ ರಾಜಕೀಯ ಪಕ್ಷವನ್ನು ಆರಂಭಿಸಿದ್ದಾರೆ. ಪಕ್ಷದ ಹೆಸರನ್ನು ‘ತಮಿಳಗ ವೆಟ್ರಿ ಕಳಗಂ’ ಎಂದು ಘೋಷಿಸಿದ್ದಾರೆ.
ಜನಪ್ರಿಯ ತಮಿಳು ನಟ ವಿಜಯ್ ಕೆಲವು ದಿನಗಳ ಹಿಂದೆ ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದರು. ವಿಜಯ್ ಅವರೇ ಪಕ್ಷದ ನಾಯಕರು. “ನಾವು ಭಾರತೀಯ ಚುನಾವಣಾ ಆಯೋಗದಲ್ಲಿ ಪಕ್ಷವನ್ನು ನೋಂದಾಯಿಸುವ ಪ್ರಕ್ರಿಯೆಯಲ್ಲಿದ್ದೇವೆ” ಎಂದು ತಂಡದ ಪ್ರಮುಖ ಸದಸ್ಯ ಇತ್ತೀಚೆಗೆ ಹೇಳಿದ್ದಾರೆ. ಈ ವೇಳೆ ವಿಜಯ್ ಅವರೇ ಪಕ್ಷದ ಹೆಸರನ್ನು ಬಹಿರಂಗಪಡಿಸಿದ್ದಾರೆ.
ಮೂಲಗಳ ಪ್ರಕಾರ ವಿಜಯ್ 2026 ರಲ್ಲಿ ತಮಿಳುನಾಡು ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸಿದ್ದಾರೆ. ರಜನಿಕಾಂತ್ ಎಂದೇ ವಿಜಯ್ ಕರೆಸಿಕೊಳ್ಳುತ್ತಾರೆ. 68 ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ವಿಜಯ್, ಒಂದು ದಶಕದಿಂದ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದರು. ಉಚಿತ ಆಹಾರ ವಿತರಣೆ, ವಿದ್ಯಾರ್ಥಿವೇತನ, ಗ್ರಂಥಾಲಯ, ಸಂಜೆ ತರಗತಿಗಳು ಮತ್ತು ಕಾನೂನು ನೆರವು ಸೇರಿದಂತೆ ಹಲವಾರು ಚಾರಿಟಿ ಮತ್ತು ಕಲ್ಯಾಣ ಉಪಕ್ರಮಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.