ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಚಿವೆ ನಿರ್ಮಲಾ ಸೀತಾರಾಮನ್ ಪಿಎ ಹೆಸರಿನಲ್ಲಿ ಧೋನಿ ಮ್ಯಾನೇಜರ್ಗೆ ವಂಚನೆ ಮಾಡಲಾಗಿದೆ.
ತಿರುಪತಿಯಲ್ಲಿ ವಿಶೇಷ ದರುಶನ ಮಾಡಿಸುವುದಾಗಿ ಹೇಳಿ ಮ್ಯಾನೇಜರ್ ಸ್ವಾಮಿನಾಥನ್ ಅವರಿಂದ 6.5 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಲಾಗಿದೆ.
ನಾನು ಎನ್.ಎಸ್. ನಕುಲ್, ಐಎಎಸ್ ಅಧಿಕಾರಿಯಾಗಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪಿಎ ಎಂದು ಪರಿಚಯಿಸಿಕೊಂಡಿದ್ದಾನೆ. ಇವರಿಂದ ಇನ್ನಿತರರನ್ನು ಪರಿಚಯ ಮಾಡಿಸಿ ನೇರ ದರುಶನ ಮಾಡಿಸುತ್ತೇವೆ ಎಂದು ಹೇಳಿದ್ದಾರೆ. ಡೊನೇಷನ್ಗಾಗಿ ಮೂರು ಲಕ್ಷ ಹಾಗೂ ದರುಶನ, ರೂಮ್ ಇತರ ಖರ್ಚುಗಳಿಗಾಗಿ ಮೂರು ಲಕ್ಷ ರೂಪಾಯಿ ಪಡೆದು ಪರಾರಿಯಾಗಿದ್ದಾರೆ ಎಂದು ಧೋನಿ ಮ್ಯಾನೇಜರ್ ದೂರು ದಾಖಲಿಸಿದ್ದಾರೆ.