ಅಡ್ವಾಣಿಗೆ ಭಾರತ ರತ್ನ: ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ನಮೋಶಿ

ಹೊಸದಿಗಂತ ವರದಿ ಕಲಬುರಗಿ:

ಭಾರತ ಸರಕಾರ ಹಿರಿಯ ನೇತಾರ ಧೀಮಂತ ನಾಯಕರಾಗಿರುವ ಲಾಲ್‍ಕೃಷ್ಣ ಅಡ್ವಾಣಿಯವರಿಗೆ ಭಾರತದ ಶ್ರೇಷ್ಠ ಪ್ರಶಸ್ತಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಹಾಗೂ ವಿಶೇಷವಾಗಿ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದೆನಗಳನ್ನು ಸಲ್ಲಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ತಿಳಿಸಿದರು.

ಶನಿವಾರ ನಗರದಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿ ಮಾತನಾಡಿದ ಅವರು, ಇದು ಭಾರತದ 135 ಕೋಟಿ ಜನಸಂಖ್ಯೆಗೆ ಸಂದ ಗೌರವಾಗಿದೆ.ಅಡ್ವಾಣಿ ಯವರು 1980ರಲ್ಲಿ ಪ್ರಾರಂಭವಾದ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ದೀರ್ಘಾವದಿವರಗೆ ಸೇವೆ ಸಲ್ಲಿಸಿರುವ ಇವರು, ಮೂರು ದಶಕಗಳ ಕಾಲ ಸಂಸದಿಯ ವೃತ್ತಿ ಜೀವನವನ್ನು ಪೂರ್ಣಗೊಳಿಸಿದ ಮೊದಲು ಗೃಹ ಸಚಿವರಾಗಿ ತಮ್ಮ ಕಾರ್ಯ ವೈಖರಿಯಿಂದ ಉಕ್ಕಿನ ಮನುಷ್ಯ ಎಂದೆ ಪ್ರಸಿದ್ದರಾಗಿದ್ದಾರೆ ಎಂದು ಹೇಳಿದರು.

ಅಟಲ್ ಬಿಹಾರಿ ವಾಜಪೇಯಿಯವರ ಸಂಪುಟದಲ್ಲಿ ಉಪ ಪ್ರಧಾನಿಗಳಾಗಿ ಸಲ್ಲಿಸಿದ ಸೇವೆ ಜನ ಮಾನಸದಲ್ಲಿ ಅಚ್ಚಳಿಯವಾಗಿ ಉಳಿದಿದೆ.
1990ರಲ್ಲಿ ಸೋಮನಾಥದಿಂದ ಅಯೋಧ್ಯವರೆಗೆ ಶ್ರೀ ರಾಮ ರಥಯಾತ್ರೆ ಮಾಡುವದರ ಮೂಲಕ ಭಾರತದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲು ಕಾರಣಿ ಭೂತರಾದ ಮಹಾನ್ ನಾಯಕ. ಇವತ್ತು ಭಾರತದಲ್ಲಿ ಬಿಜೆಪಿ ಸಂಪೂರ್ಣ ಆಡಳಿತಕ್ಕೆ ಬರಲು ಇವರು ಕಾರಣಿಕರ್ತರಾಗಿದ್ದಾರೆ ಎಂದು ಹೇಳಿದರು.

ಲಾಲ್ ಕೃಷ್ಣ ಅಡ್ವಾಣಿ ಹೋರಾಟದ ಫಲವಾಗಿ ಜನೇವರಿ ೨೨ರಂದು ಅಯೋಧ್ಯಯಲ್ಲಿ ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆ ಆದ ಈ ಸಂದರ್ಭದಲ್ಲಿ ಇದಕ್ಕೆ ಕಾರಣಿಭೂತರಾದ ಮಾನ್ಯ ಅಡ್ವಾಣಿ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಈ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವ ಸಲ್ಲಿಸಿದ್ದು ಸ್ವಾಗತಾರ್ಹ ಬೆಳವಣಿಗೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!