ಹೊಸದಿಗಂತ ಡಿಜಿಟಲ್ ಡೆಸ್ಕ್:
ಡ್ರೋನ್ ಪ್ರತಾಪ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರಿಗೆ ಹೇಳಿ ಜಿಲ್ಲಾ ಪಂಚಾಯತಿ ಟಿಕೆಟ್ ಕೊಡಿಸೋದಾಗಿ ಹಣ ಪಡೆದು ವಂಚಿಸಿದ್ದಾರೆ ಎಂದು ಚಂದನ್ ಕುಮಾರ್ ಗೌಡ ಎನ್ನುವವರು ದೂರು ನೀಡಿದ್ದಾರೆ.
ಡ್ರೋನ್ ಪ್ರತಾಪ್ 2 ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಚಂದನ್ ಕುಮಾರ್ ಗೌಡ ಎಂಬುವವರು ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ದೂರು ಸಲ್ಲಿಕೆ ಮಾಡಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ನನಗೆ ಬಹಳ ಪರಿಚಯರು, ಆಗಾಗ ಅವರನ್ನು ಫಾರ್ಮ್ ಹೌಸ್ ನಲ್ಲಿ ಭೇಟಿ ಮಾಡುತ್ತೇನೆ. ನಾನು ಹೆಚ್ಡಿಕೆ ಆಗಾಗ ಭೇಟಿ ಮಾಡುತ್ತಿರುತ್ತೇವೆ. ನಿಮಗೆ ಖಂಡಿತವಾಗಿ ಜಿಲ್ಲಾ ಪಂಚಾಯತ್ ಟಿಕೆಟ್ ಕೊಡಿಸುತ್ತೇವೆ ಎಂದು ಹೇಳಿ ಡ್ರೋನ್ ಪ್ರತಾಪ್ 2 ಲಕ್ಷ ಹಣ ಪಡೆದು ವಂಚಿಸಿದ್ದಾರೆ. ಪ್ರತಾಪ್ ಹಾಗೂ ಚಂದನ್ ಅವರು ಫೋನ್ ನಲ್ಲಿ ಮಾತನಾಡಿರುವ ಸಂಭಾಷಣೆಯ ಆಡಿಯೋ ಕೂಡ ವೈರಲ್ ಆಗಿದೆ.