ಕೇರಳ ತಮಿಳ್ನಾಡು ಗಡಿಯ ಶ್ರೀ ಶಂಕರನ್ ಕೋವಿಲ್ ದೇವಸ್ಥಾನಕ್ಕೆ ಆನೆ ಬಂತು ಆನೆ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ಹಾಗೂ ತಮಿಳುನಾಡಿನ ಗಡಿಭಾಗವಾದ ಗುಡಲೂರಿನ ಶ್ರೀ ಶಂಕರನ್ ಕೋವಿಲ್ ದೇವಸ್ಥಾನ ಈಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇದಕ್ಕೆ ಕಾರಣವಾಗಿರುವುದು ಇಲ್ಲಿನ ಉತ್ಸವದಲ್ಲಿ ಉತ್ಸಾಹದಿಂದ ಹೆಜ್ಜೆಹಾಕುತ್ತಿರುವ ಆನೆ!

ಬರೋಬ್ಬರಿ ಹತ್ತು ಅಡಿ ಎತ್ತರದ ಈ ಆನೆ ಅಸಲಿಯಲ್ಲ, ನಕಲಿ ಎಂಬುದೇ ವಿಶೇಷ. ಚಾಲಕುಡಿ ಮೂಲದ ಕಂಪನಿಯೊಂದು ಈ ರೋಬೋಟ್ ಆನೆಯನ್ನು ನಿರ್ಮಿಸಿದ್ದು, ಇದರ ನಿರ್ಮಾಣಕ್ಕೆ ಸುಮಾರು 10 ತಿಂಗಳು ಬೇಕಾಗಿದೆ. ಕಿವಿ ಮತ್ತು ತಲೆ ಅಲ್ಲಾಡಿಸುತ್ತಾ ಇದು ಅಸಲಿ ಆನೆಯೇ ಎಂಬ ಭ್ರಮೆ ಸೃಷ್ಟಿಸುತ್ತಿದೆ.

ಈ ದೇವಾಲಯವು ಕೇರಳ-ತಮಿಳುನಾಡು ಗಡಿಯಲ್ಲಿದೆ. ದೇವಳದ ಆಡಳಿತವು ಮಲಯಾಳಿಗಳಲ್ಲಿದೆ. ಈ ಹಿಂದೆ ಉತ್ಸವಕ್ಕೆ ಅಸಲಿ ಆನೆಗಳನ್ನು ಕರೆತರಲಾಗುತ್ತಿತ್ತು. ಆದರೆ ಈಗ ಅರಣ್ಯ ಪ್ರದೇಶ ಹಾಗೂ ಇಲಾಖೆ ಪರವಾನಿಗೆ ಮೊದಲಾದ ತೊಡಕುಗಳು ಹೆಚ್ಚಾಗಿರುವುದರಿಂದ ಆಡಳಿತವು ಈ ನಕಲಿ ಆನೆಯನ್ನು ಕರೆತರಲು ನಿರ್ಧರಿಸಿ ಯಶಸ್ವಿಯಾಗಿದೆ. ಅಂದಹಾಗೆ ಈ ಆನೆಯ ನಿರ್ಮಾಣಕ್ಕೆ ಬರೋಬ್ಬರಿ ಒಂಭತ್ತು ಲಕ್ಷ ರೂ. ವೆಚ್ಚ ತಗುಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!