ವಿಶ್ವದ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ 360° ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನ 360 ಡಿಗ್ರಿ ವೀಕ್ಷಣೆಯನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು ನೆಟ್ಟಿಗರು ಪರ್ವತದ ಸೌಂದರ್ಯಕ್ಕೆ ಬೆರಗಾಗಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ @historyinmemes ಎಂಬ ಬಳಕೆದಾರರು ಪೋಸ್ಟ್ ಮಾಡಿದ ವೀಡಿಯೊ, ಪರ್ವತದ ಅಭೂತಪೂರ್ವ ನೋಟವನ್ನು ಸೆರೆ ಹಿಡಿದು ನೋಡುಗರಿಗೆ ನೀಡಿದೆ. ವೀಡಿಯೊದಲ್ಲಿ, ಅನುಭವಿ ಪರ್ವತಾರೋಹಿಗಳ ತಂಡವು ಹಿಮದಿಂದ ಆವೃತವಾದ ಮೌಂಟ್ ಎವರೆಸ್ಟ್ ಶಿಖರ ಕಂಡುಬರುತ್ತದೆ.

“ಎವರೆಸ್ಟ್‌ನ ಮೇಲ್ಭಾಗದಿಂದ 360-ಡಿಗ್ರಿ ಕ್ಯಾಮೆರಾ ವ್ಯೂ” ಎಂಬುದು ವೀಡಿಯೊದ ಶೀರ್ಷಿಕೆಯಾಗಿದ್ದು, ಇದು 220,000 ಕ್ಕೂ ಹೆಚ್ಚು ಲೈಕ್ಸ್ ಮತ್ತು 35 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!