FOOD | ಭಾನುವಾರದ ಸ್ಪೆಷಲ್ ಸಿಗಡಿ ಸುಕ್ಕ ರೆಸಿಪಿ ಟ್ರೈ ಮಾಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರುಚಿಕರವಾದ ಆಹಾರವನ್ನು ಎಲ್ಲರೂ ಇಷ್ಟಪಡುತ್ತಾರೆ, ಅನ್ನದೊಂದಿಗೆ ಸಿಗಡಿ ಸುಕ್ಕ ಎಷ್ಟು ಒಳ್ಳೆಯದು? ರುಚಿಕರವಾದ ಸಿಗಡಿ ಸುಕ್ಕಾವನ್ನು ಎಂದಾದರು ಪ್ರಯತ್ನಿಸಿದ್ದೀರಾ. ಹಾಗಾದ್ರೆ ಬನ್ನಿ ನೋಡೋಣ ಯಾವ ರೀತಿಯಾಗಿ ರೆಸಿಪಿ ಮಾಡೋದು ಅಂತ..

ಅಗತ್ಯವಿರುವ ವಸ್ತು:
ಸಿಗಡಿ – ೧/೨ ಕೆಜಿ
ಹಸಿಮೆಣಸು-2
ಈರುಳ್ಳಿ – 1
ಟೊಮ್ಯಾಟೊ – 1
ತೆಂಗಿನಕಾಯಿ – 1 ಕಪ್
ಅಡುಗೆ ಎಣ್ಣೆ- ಅರ್ಧ ಕಪ್
ಅರಿಶಿನ ಪುಡಿ – ಅರ್ಧ ಚಮಚ
ಹುಣಸೆಹಣ್ಣು – ಸ್ವಲ್ಪ
ನಿಂಬೆ – 1
ಕೊತ್ತಂಬರಿ – ಸ್ವಲ್ಪ
ದನಿಯಾ ಪೌಡರ್ – ಸಣ್ಣ ಪ್ರಮಾಣ

ತಯಾರಿ ವಿಧಾನ:
*ಒಂದು ಚಮಚ ಎಣ್ಣೆಯನ್ನು ಬಾಣಲೆಗೆ ಹಾಕಿ ಬಿಸಿ ಮಾಡಿ. ಕರಿಬೇವಿನ ಸೊಪ್ಪು ಮತ್ತು ತೆಂಗಿನಕಾಯಿ ಹಾಕಿ ಹುರಿಯಿರಿ.
*ಒಂದು ಪ್ಯಾನ್‌ಗೆ ಎಣ್ಣೆಯನ್ನು ಸುರಿಯಿರಿ, ಈರುಳ್ಳಿ ಸೇರಿಸಿ ಮತ್ತು ಬಣ್ಣ ಬದಲಾಗುವವರೆಗೆ ಹುರಿಯಿರಿ. ತೊಳೆದ ಮತ್ತು ಸಿಪ್ಪೆ ಸುಲಿದ ಸಿಗಡಿ, ರುಚಿಗೆ ಉಪ್ಪು, ಅರಿಶಿನ ಪುಡಿ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ, ಎಲ್ಲವನ್ನೂ ಮಿಶ್ರಣ ಮಾಡಿ, ಪ್ಯಾನ್ ಮುಚ್ಚಿ ಬೇಯಿಸಿ.
*ಕೊತ್ತಂಬರಿ ಸೊಪ್ಪು, ಹುಣಸೆಹಣ್ಣು ಮತ್ತು ಬೇಕಾದಷ್ಟು ನೀರು ಹಾಕಿ ಕಲಕಿ, ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ಗಟ್ಟಿಯಾದಾಗ ರುಚಿಕರವಾದ ಸಿಗಡಿ ಸುಕ್ಕ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!