ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಸೋಮವಾರ) ಲೋಕಸಭೆಯಲ್ಲಿ (Loksabha) ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಹೇಳಿದ್ದಾರೆ.
ಬಿಜೆಪಿ ಎರಡನೇ ಅವಧಿ ಸರ್ಕಾರದಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನ ಆರ್ಟಿಕಲ್ 370ನ್ನು ರದ್ದಪಡಿಸಲಾಯಿತು. ಇದೀಗ ಇಡೀ ದೇಶವೇ ಹೇಳುತ್ತಿದೆ ಅಬ್ ಕಿ ಬಾರ್ ಮೋದಿ ಸರ್ಕಾರ. ಮಲ್ಲಿಕಾರ್ಜುನ ಖರ್ಗೆ ಕೂಡ ಹೇಳಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 370 ಸ್ಥಾನ ಸಿಗಲಿದೆ. ಎನ್‌ಡಿಎ ಮೈತ್ರಿಗೆ 400ಕ್ಕಿಂತ ಹೆಚ್ಚಿನ ಸ್ಥಾನ ಸಿಗಲಿದೆ ಎಂದು ಪ್ರಧಾನಿ ಮೋದಿ ಭವಿಷ್ಯ ನುಡಿದಿದ್ದಾರೆ.
ನಮ್ಮ ಮೊದಲ ಅವಧಿಯಲ್ಲಿ ಯುಪಿಎ ಸರ್ಕಾರ ಮಾಡಿದ ತಪ್ಪು ಸರಿಪಡಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳಲಾಯಿತು. 2ನೇ ಅವಧಿಯಲ್ಲಿ ನಾವು ಹೊಸ ಯೋಜನೆ ಮೂಲಕ ಭವ್ಯ ಭಾರತದ ಭವಿಷ್ಯ ರೂಪಿಸಿದ್ದೇವೆ. ಇದೀಗ 3ನೇ ಅವಧಿಯಲ್ಲಿ ವಿಕಸಿತ ಭಾರತ ಸಂಕಲ್ಪ ಪೂರ್ಣಗೊಳಿಸುತ್ತೇವೆ ಎಂದು 3ನೇ ಅವಧಿಯಲ್ಲಿ ಮತ್ತೆ ಸರ್ಕಾರ ರಚಿಸುವ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದರು.
ಆಯುಷ್ಮಾನ್ ಭಾರತ್, ಸ್ವಚ್ಚ ಭಾರತ್ , ಬೇಟಿ ಪಡಾವೋ ಬೇಟಿ ಬಚಾವೋ, ಜಿಎಸ್‌ಟಿ ನಿರ್ಣಯ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಾವು ರೂಪಿಸಿದ್ದೇವು. ಇದನ್ನು ಜನರು ಮೆಚ್ಚಿನ ನಮಗೆ ಭರಪೂರ ಆಶೀರ್ವಾದ ಮಾಡಿದ್ದರು.
2ನೇ ಅವಧಿಯಲ್ಲಿ ಈ ದೇಶದ ಜನರು ಸುದೀರ್ಘ ದಿನಗಳಿಂದ ಕಾಯುತ್ತಿದ್ದ ಬೇಡಿಕೆಯನ್ನು ಪೂರೈಸಿದ್ದೇವೆ.370ರ ವಿಧಿಯನ್ನು ರದ್ದುಗೊಳಿಸಿದ್ದೇವೆ. ನಾರಿ ಶಕ್ತಿ ವಂದನ ಅಧಿನಿಯಮ, ಅಂತರಿಕ್ಷದಿಂದ ಒಲಿಪಿಂಕ್ಸ್ ವರಗೆ, ಸಶಸ್ತ್ರ ಬಲದಿಂದ ಸಂಸತ್ ವರೆಗೆ ನಾರಿ ಶಕ್ತಿ ಮೊಳಗುತ್ತಿದೆ. ನಾರಿ ಶಕ್ತಿ ಸಶಕ್ತಿರಣವನ್ನು ದೇಶ ನೋಡಿದೆ. ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದ ವರೆಗೆ ಅಪೂರ್ಣಗೊಂಡಿದ್ದ ಯೋಜನೆಗಳನ್ನು ನಾವು ಪೂರ್ಣಗೊಳಿಸಿದ್ದೇವೆ ಎಂದು ಸಾಧನೆಗಳನ್ನು ತೆರೆದಿಟ್ಟರು.
ಮೋದಿ ಭಾಷಣಕ್ಕೆ ವಿಪಕ್ಷಗಳು ತೀವ್ರ ಅಡ್ಡಿ
ಪ್ರಧಾನಿ ಮೋದಿ ಭಾಷಣಕ್ಕೆ ವಿಪಕ್ಷಗಳು ತೀವ್ರ ಅಡ್ಡಿಪಡಿಸಿತ್ತು. ಈ ವೇಳೆ ಭಾಷಣ ನಿಲ್ಲಿಸಿದ ಮೋದಿ, ಕೆಲ ಹೊತ್ತಿನ ಬಳಿಕ ಭಾಷಣ ಮುಂದುವರಿಸಿದರು. ಬ್ರಿಟಿಷರ್ ಮಾಡಿದ ಕಾನೂನುಗಳನ್ನೇ ಇಲ್ಲಿವರೆಗೆ ಪಾಲಿಸಿಕೊಂಡ ಬರಲಾಗುತ್ತಿತ್ತು. ಇದೀಗ ನಮ್ಮ ಸರ್ಕಾರ ನ್ಯಾಯ ಸಂಹಿತೆ ಕಾನೂನು ಜಾರಿಗೆ ತಂದಿದ್ದೇವೆ.
ಭಗವಾನ್ ರಾಮ ತನ್ನದೇ ಮನೆಗೆ ಆಗಮಿಸಿದ್ದಾನೆ. ಭಾರತೀಯ ಮಹಾನ್ ಸಂಸ್ಕೃತಿಗೆ ಮತ್ತಷ್ಟು ಉತ್ತೇಜನ ನೀಡುವ ಭವ್ಯ ಮಂದಿರ ನಿರ್ಮಾಣಗೊಂಡಿದೆ. ಅಬ್ ಕಿ ಬಾರ್ ಮೋದಿ ಸರ್ಕಾರ ಎಂದು ಇಡಿ ದೇಶವೇ ಹೇಳುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಕೂಡ ಹೇಳುತ್ತಿದ್ದಾರೆ . ಬಿಜೆಪಿ 370 ಸೀಟು, ಎನ್‌ಡಿಎ ಕೂಟಕ್ಕೆ ಒಟ್ಟು 400ಕ್ಕಿಂತ ಹೆಚ್ಚಿನ ಸ್ಥಾನ ಈ ಚುನಾವಣೆಯಲ್ಲಿ ಸಿಗಲಿದೆ ಎಂದು ಮೋದಿ ಹೇಳಿದ್ದಾರೆ.