ರೀಲ್ಸ್​ ಮಾಡುವ ಭರದಲ್ಲಿ ಕಾಲು ಜಾರಿ ಜಲಪಾತಕ್ಕೆ ಬಿದ್ದ ಹುಡುಗಿಯರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೀಲ್ಸ್ ಮಾಡುವ ಭರದಲ್ಲಿ ಇಬ್ಬರು ಹುಡುಗಿಯರು ಕಾಲು ಜಾರಿ ಜಲಪಾತಕ್ಕೆ ಬಿದ್ದ ಘಟನೆ ಮಲ್ಕನ್​​ಗಿರಿ ಜಿಲ್ಲೆಯಲ್ಲಿ ನಡೆದಿದೆ. ಗೊಬಿಂದಪಾಲಿ ಜಿಲ್ಲೆಯ ಗುಮ್ಮಜ್​ಹಾರ ಜಲಪಾತದಲ್ಲಿ ಈ ಘಟನೆ ನಡೆದಿದೆ.

ಹುಡುಗಿಯರು ಜಲಪಾತಕ್ಕೆ ಬಿದ್ದಿರುವುದನ್ನು ಸ್ಥಳೀಯರು ನೋಡಿದ್ದಾರೆ. ಕೂಡಲೇ ಅವರನ್ನು ರಕ್ಷಿಸಲು ನದಿಗೆ ಹಾರಿದ್ದಾರೆ.

ಜೀತು ಗೌಡ ಮತ್ತು ದೀಪಕ್ ಗೌಡ ಎಂಬ ಇಬ್ಬರು, ಹುಡುಗಿಯರು ಜಲಪಾತಕ್ಕೆ ಜಾರುತ್ತಿರುವುದನ್ನು ಗಮನಿಸಿ ತಕ್ಷಣ ನೀರಿಗೆ ಹಾರಿ ಇಬ್ಬರು ಹುಡುಗಿಯರನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!