Tuesday, January 6, 2026

CINE | ತಮಿಳಿಗರ ಹೃದಯ ಕದ್ದ ‘ಮಾರ್ಕ್’: ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಆರಂಭ!

ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಕನ್ನಡದಲ್ಲಿ ಯಶಸ್ವಿಯಾಗಿ ಓಟ ಮುಂದುವರೆಸಿದ್ದು, ಅದರ ತಮಿಳು ಆವೃತ್ತಿ ಇದೀಗ ತಮಿಳುನಾಡಿನಲ್ಲಿ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಜನವರಿ 1 ರಂದು ತಮಿಳು ಆವೃತ್ತಿಯಲ್ಲಿ ಬಿಡುಗಡೆಯಾದ ಈ ಚಿತ್ರವು ಸ್ಥಳೀಯ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ತಮಿಳು ಚಿತ್ರರಂಗಕ್ಕೆ ಹೊಂದುವಂತೆಯೇ ಸಿನಿಮಾ ಫೀಲ್ ನೀಡಿದೆ. ಸ್ಥಳೀಯ ವಿಮರ್ಶಕರು ಮತ್ತು ಪ್ರೇಕ್ಷಕರು ಪಾಸಿಟಿವ್ ಪ್ರತಿಕ್ರಿಯೆ ನೀಡಿರುವುದು, ಸಿನಿಮಾದ ವೀಕ್ಷಣೆ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಎಂಬ ನಿರೀಕ್ಷೆ ಮೂಡಿಸಿದೆ.

ಚಿತ್ರದಲ್ಲಿ ನವೀನ್ ಚಂದ್ರ, ಯೋಗಿ ಬಾಬು ಸೇರಿದಂತೆ ಹಲವಾರು ತಮಿಳು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ನಿರ್ದೇಶಕ ವಿಜಯ್ ಕಾರ್ತಿಕೇಯಿ ಪರಿಣತಿ ಚಿತ್ರಕ್ಕೆ ಬಲ ನೀಡಿದೆ. ಸುದೀಪ್ ತಮ್ಮ ಪಾತ್ರವನ್ನು ತಮಿಳಿನಲ್ಲಿ ಸ್ವತಃ ಡಬ್ ಮಾಡಿದ್ದಾರೆ, ಇದು ಪ್ರೇಕ್ಷಕರಿಗೆ ವಿಶೇಷ ಆಕರ್ಷಣೆಯಾಗಿದೆ.

ಇದನ್ನೂ ಓದಿ: FOOD | ಲಂಚ್‌ಗೆ ಸೂಪರ್ ಸ್ಪೆಷಲ್ ಡಿಶ್: ಆಂಧ್ರ ಸ್ಟೈಲ್ ಚಿಕನ್ ಕರಿ

ಕಥೆಯ ವೇಗ, ಆ್ಯಕ್ಷನ್, ಸಾಂಗ್ಸ್ ಗಳ ಹೈ-ಎನರ್ಜಿ ಮೂಡ್ ‘ಮಾರ್ಕ್’ ಚಿತ್ರವನ್ನು ತಮಿಳುನಾಡಿನ ಪ್ರೇಕ್ಷಕರಿಗೆ ಇಷ್ಟವಾದಂತಿದೆ. ಬಿಡುಗಡೆ ದಿನಗಳಲ್ಲಿ 60ಕ್ಕೂ ಹೆಚ್ಚು ಶೋಗಳು ಲಭ್ಯವಾಗಿದ್ದು, ನಾಲ್ಕು ದಿನದಲ್ಲಿ 35 ಕೋಟಿ ಗಳಿಕೆ ದಾಖಲಾಗಿದೆ. ಮುಂದಿನ ವಾರದ ಶೋಗಳೊಂದಿಗೆ, ಚಿತ್ರದ 50 ಕೋಟಿ ಕ್ಲಬ್ ಪ್ರವೇಶಿಸುವ ಸಾಧ್ಯತೆ ಕಾಣುತ್ತಿದೆ.

error: Content is protected !!