ಅಂಡರ್-19 ವಿಶ್ವಕಪ್‌: ಆಫ್ರಿಕಾ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟ ಟೀಮ್ ಇಂಡಿಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಾರತ ತಂಡ 19 ವಯೋಮಿತಿ ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಐದು ಬಾರಿಯ ಚಾಂಪಿಯನ್‌ ಭಾರತ ತಂಡ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಅಥವಾ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಬೆನೋನಿಯ ವಿಲೋಮೂರ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡ 7 ವಿಕೆಟ್‌ಗೆ 244 ರನ್‌ಗಳ ಸವಾಲಿನ ಮೊತ್ತವನ್ನು ಪೇರಿಸಿತ್ತು. ಪ್ರತಿಯಾಗಿ ಭಾರತ ತಂಡ 48.5 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 248 ರನ್‌ ಬಾರಿಸುವ ಮೂಲಕ ಸತತ ಐದನೇ ಬಾರಿಗೆ 19 ವಯೋಮಿತಿ ವಿಶ್ವಕಪ್‌ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿತು.

ಆರಂಭಿಕ ಆಟಗಾರರಾದ ಆದರ್ಶ್‌ ಸಿಂಗ್‌ (0), ಆರ್ಶಿನ್‌ ಕುಲಕರ್ಣಿ (1), ಮುಶೀರ್‌ ಖಾನ್‌ ಹಾಗೂ ಪ್ರಿಯಾಂಶು ಮೂಲಿಯಾ (5) ವಿಕೆಟ್‌ಗಳನ್ನು ಕೇವಲ 32 ರನ್‌ ಬಾರಿಸುವಾಗಲೇ ಕಳೆದುಕೊಂಡಿದ್ದ ಭಾರತ ತಂಡ ಸೋಲಿನ ಸೂಚನೆಯಲ್ಲಿತ್ತು. ಆದರೆ, ಈ ವೇಳೆ ನಾಯಕ ಉದಯ್‌ ಶರಣ್‌ಗೆ ಜೊತೆಯಾದ 6ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಸಚಿನ್‌ ಧಾಸ್‌ ಅಮೂಲ್ಯ ಜೊತೆಯಾಟ ನಿಭಾಯಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. 5ನೇ ವಿಕೆಟ್‌ಗೆ ಈ ಜೋಡಿ ಅಮೂಲ್ಯ 171 ರನ್‌ ಜೊತೆಯಾಟವಾಡಿತು.

ಗೆಲುವಿನಿಂದ ಕೇವಲ 4 ರನ್‌ ದೂರವಿದ್ದಾಗ 124 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 81 ರನ್‌ ಬಾರಿಸಿದ್ದ ಉದಯ್‌ ಶರಣ್‌ ರನ್‌ಔಟ್‌ ಆಗಿ ನಿರ್ಗಮಿಸಿದರೂ ಮರು ಎಸೆತದಲ್ಲಿ ರಾಜ್‌ ಲಿಂಬಾಣಿ ಬೌಂಡರಿ ಸಿಡಿಸಿ ತಂಡವನ್ನು ಫೈನಲ್‌ಗೇರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!