ದಿನಭವಿಷ್ಯ: ಇಂದು ಯಾವ ರಾಶಿಗೆ ಶುಭ? ಯಾರಿಗೆ ಅಶುಭ?

ಮೇಷ
ಎಲ್ಲರ ಮನ ಗೆಲ್ಲುವಲ್ಲಿ ಸಫಲರಾಗುವಿರಿ. ಆಪ್ತರೊಡನೆ ಸಂಬಂಧ ವೃದ್ಧಿ. ಹಣಕಾಸು ಸಮಸ್ಯೆ ಪರಿಹಾರ ಕಾಣುವುದು. ಬಂಧುಗಳ ಭೇಟಿ.

ವೃಷಭ
ನಿಮ್ಮ ಕೆಲಸ ಇತರರಿಗೆ ತೃಪ್ತಿ ತರಲಾರದು. ಅವರಿಂದ ಟೀಕೆ ಎದುರಿಸುವಿರಿ. ಕೌಟುಂಬಿಕ ವಿಷಯದಲ್ಲೂ ಒತ್ತಡ ಎದುರಿಸುವಿರಿ.

ಮಿಥುನ
ಕ್ರಿಯಾತ್ಮಕ ಕಾರ್ಯದಲ್ಲಿ ತೊಡಗಲು ಸಕಾಲ. ಮಾನಸಿಕ ತೃಪ್ತಿ. ಎಲ್ಲರನ್ನು ಎಲ್ಲ ಕಾಲಕ್ಕೆ ಮೆಚ್ಚಿಸಲು ಆಗದು ಎಂಬ ಸತ್ಯ ಇಂದು ಅರಿವಾಗುವುದು.

ಕಟಕ
ಮನೆಯಲ್ಲಿ ಉದ್ವಿಗ್ನ ಸ್ಥಿತಿ ನೆಲೆಸೀತು. ಅದಕ್ಕೆ ವ್ಯಕ್ತಿಯೊಬ್ಬರ ವರ್ತನೆ ಕಾರಣವಾಗುವುದು. ಪರಿಸ್ಥಿತಿಯನ್ನು ಸಮಾಧಾನದಿಂದ ನಿಭಾಯಿಸಿರಿ.

ಸಿಂಹ
ಸಂಗಾತಿಯ ಜತೆಗೆ ಅನವಶ್ಯ ಕೋಪ ತೋರದಿರಿ. ಭಿನ್ನಾಭಿಪ್ರಾಯ ಮೂಡಿದರೂ ಅದನ್ನು ಸಮಾಧಾನದಿಂದ ಪರಿಹರಿಸಿರಿ.

ಕನ್ಯಾ
ಯಾರೊಂದಿಗೂ ಮಾತಿನ ಚಕಮಕಿಗೆ ಹೋಗದಿರಿ. ನಿಮ್ಮ ಮನ ಶ್ಯಾಂತಿ ಕದಡಬಹುದು. ಹಣದ ಸಮಸ್ಯೆ ಇರದಿ
ದ್ದರೂ ಆರ್ಥಿಕ ವಿಚಾರದಲ್ಲಿ ಸಮಸ್ಯೆ.

ತುಲಾ
ವೃತ್ತಿಗೆ ಸಂಬಂಧಿಸಿ ನಿಮಗೆ ಅನುಕೂಲಕರ ಬೆಳವಣಿಗೆ. ಬಂಧುಗಳ ಜತೆಗೆ ವೈಮನಸ್ಸು ಉಂಟಾದೀತು. ಸಣ್ಣ ವಿಷಯಕ್ಕೂ ಜಗಳ ಮಾಡಲು ಹೋಗದಿರಿ.

ವೃಶ್ಚಿಕ
ನಿಮ್ಮ ಅಭಿಪ್ರಾಯ ಎಲ್ಲರೂ ಒಪ್ಪಲಾರರು. ಇದರಿಂದ ನಿಮಗೆ ಅಸಮಾಧಾನ. ಮನೆಯ ಶಾಂತಿ ಕದಡಲು ಅವಕಾಶ ನೀಡದಿರಿ. ಹೊಂದಾಣಿಕೆ ಒಳಿತು.

ಧನು
ಸಂಬಂಧದಲ್ಲಿ ತಿಕ್ಕಾಟ ಉಂಟಾಗಬಹುದು. ನಿಮ್ಮ ಕರ್ತವ್ಯ ನಿಭಾಯಿಸುವಲ್ಲಿ  ಉದಾಸೀನ ತೋರದಿರಿ.  ವಿವಾಹಿತರಲ್ಲಿ ಅಭಿಪ್ರಾಯ ಭೇದ

ಮಕರ
ಸಂಬಂಧದಲ್ಲಿ ನೇರ ಮಾತು ಒಳ್ಳೆಯದು. ಕೆಲವರ ಗಿಲೀಟಿನ ಮಾತುಗಳನ್ನು ನಂಬಬೇಡಿ. ಆರ್ಥಿಕ ಒತ್ತಡ ಕಾಡುವುದು. ಹಣದ ಕೊರತೆ.

ಕುಂಭ
ನಿಮ್ಮ ಕಾರ್ಯ ನಿರ್ವಹಿಸುವಾಗ ತಾಳ್ಮೆ ಕೆಡುವ ಪ್ರಸಂಗ ಉಂಟಾದೀತು. ವಿಚಲಿತರಾಗದಿರಿ. ನಿಮ್ಮ ಕೆಲಸಕ್ಕಷ್ಟೇ ಹೆಚ್ಚು ಗಮನ ಕೇಂದ್ರೀಕರಿಸಿ.

ಮೀನ
ಖಾಸಗಿ ವಿಚಾರ ಅಥವಾ ವೃತ್ತಿಯ ವಿಚಾರದಲ್ಲಿ ನೇರವಾಗಿ ವ್ಯವಹರಿಸಿ. ಸುತ್ತುಬಳಸಿನ ದಾರಿ ಬೇಡ. ಕೆಲವರ ನಿಷ್ಠುರ ಕಟ್ಟಿಕೊಂಡರೂ ನಿಮ್ಮ ಹಿತಾಸಕ್ತಿ ಕಾಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!