ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ದರೋಡೆಕೋರರ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಚಿಕಾಗೋದಲ್ಲಿ ಭಾರತದ ಹೈದರಾಬಾದ್‌ನ ವಿದ್ಯಾರ್ಥಿಯೊಬ್ಬನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಈ ವಿಡಿಯೋದಲ್ಲಿ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಯೊಬ್ಬ ರಕ್ತದ ಸುರಿಯುತ್ತಿದ್ದರು ನನ್ನನ್ನು ಕಾಪಾಡಿ ಎಂದು ಸಹಾಯಕ್ಕಾಗಿ ಕೇಳುತ್ತಿರುವುದನ್ನು ಕಾಣಬಹುದು.

ಸೈಯದ್ ಮಜಾಹಿರ್ ಅಲಿ ಹಲ್ಲೆಗೆ ಒಳಗಾಗಿರುವ ವಿದ್ಯಾರ್ಥಿ. ಅವರ ಪತ್ನಿ ಸೈಯದಾ ರುಕುಲಿಯಾ ಫಾತಿಮಾ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರದಲ್ಲಿ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಅಮೆರಿಕಕ್ಕೆ ಪ್ರಯಾಣಿಸಲು ಅನುಮತಿ ಕೋರಿದ್ದಾರೆ.

ಅಮೆರಿಕದ ಚಿಕಾಗೋದಲ್ಲಿ ನನ್ನ ಗಂಡನ ಸುರಕ್ಷತೆಯ ಬಗ್ಗೆ ನಾನು ಚಿಂತಿತಳಾಗಿದ್ದೇನೆ. ಗಾಯಗೊಂಡಿರುವ ನನ್ನ ಪತಿಗೆ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ದಯವಿಟ್ಟು ನನಗೆ ಸಹಾಯ ಮಾಡಿ. ಸಾಧ್ಯವಾದರೆ ನನ್ನ ಮಕ್ಕಳನ್ನು ಅಮೆರಿಕಕ್ಕೆ ಕರೆತರುವಂತೆ ಪತ್ನಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಅಲಿ ಇಂಡಿಯಾನಾ ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಚಿಕಾಗೋದ ಬೀದಿಗಳಲ್ಲಿ ಮೂವರು ದುಷ್ಕರ್ಮಿಗಳು ಅವರನ್ನು ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಯ ಹುಟ್ಟಿಸುವಂತೆ ಕಂಡುಬಂದಿದೆ.

ನಾನು ಮನೆಗೆ ಹಿಂದಿರುಗಿದಾಗ, ನನ್ನ ಮೇಲೆ ನಾಲ್ಕು ಜನರು ಹಲ್ಲೆ ಮಾಡಿದ್ದಾರೆ. ದಯವಿಟ್ಟು ನನಗೆ ಸಹಾಯ ಮಾಡಿ ವಿಡಿಯೋದಲ್ಲಿ ರಕ್ಷಣೆಗಾಗಿ ಅಲಿ ಅಂಗಲಾಚಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!