ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವಾರವಷ್ಟೇ ಸರ್ವೈಕಲ್ ಕ್ಯಾನ್ಸರ್ಗೆ ಬಲಿಯಾಗಿ ಪವಾಡ ಸದೃಶ್ಯರಾಗಿ ಬದುಕಿಬಂದ ಪೂನಮ್ ಪಾಂಡೆ ಸರ್ವೈಕಲ್ ಕ್ಯಾನ್ಸರ್ ರಾಯಭಾರಿಯಂತೆ!
32 ವರ್ಷಕ್ಕೆ ಕ್ಯಾನ್ಸರ್ನಿಂದ ನಟಿ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಎಷ್ಟೋ ಜನರಿಗೆ ಆಘಾತ ನೀಡಿದ್ದು, ಪೂನಂ ಸ್ನೇಹಿತರು ಆಕೆಯನನ್ನು ನೆನೆದು ಕಣ್ಣೀರು ಹಾಕಿದ್ದರು. ಆದರೆ ಇದೆಲ್ಲವೂ ಸರ್ವೈಕಲ್ ಕ್ಯಾನ್ಸರ್ ಬಗ್ಗೆ ಜಾಗೃತಿ ಎಂದು ಪೂನಂ ಎದ್ದು ನಿಂತಿದ್ದರು.
ಜಾಗೃತಿಗಾಗಿ ತನ್ನ ಸಾವಿನ ಐಡಿಯಾ ಹಾಕಿದ ಪೂನಂ ಪಾಂಡೆ ಸರ್ವೈಕಲ್ ಕ್ಯಾನ್ಸರ್ ರಾಯಭಾರಿ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗುತ್ತದೆ. ತನ್ನ ಜೀವವನ್ನೇ ಪಣಕ್ಕಿಟ್ಟು ಕ್ಯಾನ್ಸರ್ಗಾಗಿ ರಿಸ್ಕ್ ತೆಗೆದುಕೊಂಡ ಪೂನಂ ಎಫರ್ಟ್ಸ್ನ್ನು ಸರ್ಕಾರ ಗಮನಿಸಿ ಅಂಬಾಸಿಡರ್ ಮಾಡುವ ಬಗ್ಗೆ ಚಿಂತನೆ ನಡೆಸಿದೆ ಎನ್ನುವ ಸುದ್ದಿ ಹರಿದಾಡಿತ್ತು.
ಸರ್ವೈಕಲ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ನಿರ್ಧರಿಸಿದೆ. ಆದರೆ ಪೂನಂ ಪಾಂಡೆ ಅಂಬಾಸಿಡರ್ ಆಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.