ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ವನ್ಯ ಜೀವಿಗಳ ಅಂಗಾಂಗಳನ್ನು ಇಟುಕೊಂಡಿದ್ದರೆ ಏಪ್ರಿಲ್ 10ರೊಳಗೆ ಅದನ್ನು ಸರ್ಕಾರಕ್ಕೆ ಒಪ್ಪಿಸಿ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಹುಲಿ, ಚಿರತೆ ಹಲ್ಲು, ಆನೆ ಕೊಂಬು, ದಂತ, ಕೂದಲು ಇನ್ನಿತರ ಅಂಗಾಂಗಳನ್ನು ಹಿಂದಿರುಗಿಸಲು ಇದು ಡೆಡ್‌ಲೈನ್ ಆಗಿದೆ. ಇತ್ತೀಚೆಗಷ್ಟೇ ಬಿಗ್‌ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಹುಲಿಯ ಉಗುರಿನ ಪೆಂಡೆಂಟ್ ಹಾಕಿದ್ದಾರೆಂದು ವಿಚಾರಣೆ ನಡೆಸಲಾಗಿತ್ತು. ಇದಾದ ನಂತರ ಸಾಕಷ್ಟು ಸೆಲೆಬ್ರಟಿಗಳಿಗೂ ಸಂಕಷ್ಟ ಎದುರಾಗಿತ್ತು.