ಪತ್ತೆಯಾಗದ ದೃಷ್ಟಿ ಸಮಸ್ಯೆಯಿಂದ ಯಾವುದೇ ಮಗು ಜೀವನ ಕಳೆದುಕೊಳ್ಳಬಾರದು: ಡಾ.ರೋಹಿತ್ ಶೆಟ್ಟಿ

ಹೊಸದಿಗಂತ ವರದಿ,ಬೆಂಗಳೂರು:

ಮಗುವಿನ ತೊಂದರೆಗಳಿಗೆ ಮೂಲ ಕಾರಣವನ್ನು ಗುರುತಿಸುವವರೆಗೆ ಪೋಷಕರು ಮತ್ತು ಶಿಕ್ಷಕರು ಮಗುವನ್ನು ದುರ್ಬಲ ಎಂದು ಪರಿಗಣಿಸುವುದು ತಡೆಯಬೇಕು. ಪತ್ತೆಯಾಗದ ದೃಷ್ಟಿ ಸಮಸ್ಯೆಗಳಿಂದಾಗಿ ಯಾವುದೇ ಮಗು ತಮ್ಮ ದೃಷ್ಟಿ ವೃತ್ತಿ ಅಥವಾ ಜೀವನವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸಬಾರದು ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ರೋಹಿತ್ ಶೆಟ್ಟಿ ತಿಳಿಸಿದರು.

ಶುಕ್ರವಾರ ರಾಜಾಜಿನಗರ ಕಾರ್ಡ್ ರಸ್ತೆಯಯಲ್ಲಿರುವ ನಾರಾಯಣ ನೇತ್ರಾಲಯದ ಸಭಾಂಗಣದಲ್ಲಿ ಪರೀಕ್ಷೆಯ ಸಮಯದಲ್ಲಿ ಮಕ್ಕಳು ಎದುರಿಸುತ್ತಿರುವ ದೃಷ್ಟಿಗೆ ಸಂಬಂಧಿಸಿದ ಸವಾಲುಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಪ್ರದಾಯಿಕ ಕಣ್ಣಿನ ತಪಾಸಣೆಗಳು ಸಾಮಾನ್ಯವಾಗಿ ದೂರದ ದೃಷ್ಟಿಯ ಸಮಸ್ಯೆಗಳನ್ನು ಗುರುತಿಸುವುದರ ಮೇಲೆ ಕೇಂದ್ರೀಕರಿಸುತ್ತವೆ. ಹೀಗಾಗಿ ವಿವರವಾದ ಆರ್ಥೋಪ್ಟಿಕ್ ಮೌಲ್ಯಮಾಪನದ ಅಗತ್ಯವಿರುವ ಕಣ್ಣಿನ ಸಮಸ್ಯೆಗಳ ರೋಗನಿರ್ಣಯವನ್ನು ಕಳೆದುಕೊಳ್ಳುತ್ತವೆ. ಈ ಮೌಲ್ಯಮಾಪನವು ಕನ್ನಡಕಗಳು, ನಿಗದಿಪಡಿಸಲಾದ ಕಣ್ಣಿನ ವ್ಯಾಯಾಮಗಳು ಹಾಗೂ ಕೆಲವೊಮ್ಮೆ ಅಪರೂಪದ ಪ್ರಕರಣಗಳಲ್ಲಿ ವಿಶೇಷ ಕೇಂದ್ರಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗೊಂಡಿರುವ ಸೂಕ್ತವಾದ ಚಿಕಿತ್ಸೆಯನ್ನು ಖಚಿತಪಡಿಸುತ್ತದೆ ಎಂದರು.

ನಾರಾಯಣ ನೇತ್ರಾಲಯದ ವಿಎಸ್‌ಎಂ (ಮೆಟೆರನ್)ನ ಮುಖ್ಯಕಾರ್ಯನಿರ್ವಾಹಕ ಎಸ್. ಕೆ. ಮಿತ್ತಲ್ ಮಾತನಾಡಿ, ಡಿಜಿಟಲ್ ಮಾರ್ಗವು ಹೊಸ ಜೀವನ ವಿಧಾನವಾಗಿದೆ. ಇದನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಾಗದಿದ್ದರೂ ಬದಲಾಗುತ್ತಿರುವ ಜೀವನಶೈಲಿಗೆ ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವಾಗ ಈ ಡಿಜಿಟಲ್ ಒತ್ತಡವನ್ನು ನಿಭಾಯಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ನುಡಿದರು.

ಬೊಮ್ಮಸಂದ್ರ ಶಾಖೆ ನಾರಾಯಣ ನೇತ್ರಾಲಯದ ಮಕ್ಕಳ ನೇತ್ರತಜ್ಞರು ಮತ್ತು ಮೆಳ್ಳಗಣ್ಣಿನ ವಿಶೇಷತಜ್ಞೆ ಡಾ. ಜ್ಯೋತಿ ಮಟಾಲಿಯಾ ಮಾತನಾಡಿ, ಮಕ್ಕಳು ಉತ್ತಮ ದೃಷ್ಟಿಗಾಗಿ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಬೇಕು. ಇದರಿಂದ ಕಣ್ಣಿನ ಆರೋಗ್ಯಕ್ಕಾಗಿ ಸರಳ ಕ್ರಮಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಾರಾಯಣ ನೇತ್ರಾಲಯದ ಮಕ್ಕಳ ನೇತ್ರತಜ್ಞೆ ಮತ್ತು ಮೆಳ್ಳಗಣ್ಣಿನ ವಿಶೇಷತಜ್ಞರಾದ ಡಾ. ಸುಮಿತಾ, ಡಾ. ಭಾನುಮತಿ, ಎಂ, ಡಾ. ಜ್ಯೋತಿ ಮಟಾಲಿಯಾ ಸೇರಿದಂತೆ ಇತರರಿದ್ದರು.

ಪರೀಕ್ಷೆಗಳಿಗೆ ಅಧ್ಯಯನ ಮಾಡುವಾಗ ಕೆಲವು ಸಲಹೆಗಳನ್ನು ಅನುಸರಿಸುವುದು ಅತ್ಯಗತ್ಯ:

* ಓದುವಾಗ ಕಣ್ಣು ಹಾಗೂ ಪುಸ್ತಕದ ಅಂತರವು 14-16 ಇಂಚುಗಳು ಇರುವ ಹಾಗೆ ಕಾಪಾಡಿಕೊಳ್ಳಬೇಕು

* ಆನ್‌ಲೈನ್ ಅಧ್ಯಯನ ಸಾಮಗ್ರಿಗಳಿಗಾಗಿ ಮೊಬೈಲ್‌ಗಳಂತಹ ಸಣ್ಣ ಸಾಧನಗಳನ್ನು ಬಳಸುವುದನ್ನು ತಪ್ಪಿಸಿ, ಆಗಾಗ್ಗೆ ವಿರಾಮ ತೆಗೆದುಕೊಳ್ಳಲು 20-20- 20 ನಿಯಮವನ್ನು ಅನುಸರಿಸಿಬೇಕು.

* ವಿರಾಮದ ಸಮಯದಲ್ಲಿ, ಮೊಬೈಲ್‌ಗಳನ್ನು ಬಳಸುವುದನ್ನು ಅಥವಾ ಟಿವಿ ನೋಡುವುದನ್ನು ತಪ್ಪಿಸಿ, ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಲು ಮತ್ತು ಏಕಾಗ್ರತೆಯನ್ನು ಸುಧಾರಿಸಲು ಧ್ಯಾನವನ್ನು ಅಭ್ಯಾಸ ಮಾಡಿಕೊಳ್ಳಿ. ಹಾಗೂ ಆರೋಗ್ಯಕರ ಆಹಾರವನ್ನು ಸೇವಿಸಿ. ಸಾಕಷ್ಟು ನಿದ್ರೆಯನ್ನು ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!