ರಾಮನಿಲ್ಲದ ಭಾರತವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ: ಗೃಹ ಸಚಿವ ಅಮಿತ್ ಶಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯಲ್ಲಿ ರಾಮಲಲಾನ ಪ್ರಾಣಪ್ರತಿಷ್ಠೆ ಸಂಪನ್ನಗೊಂಡ ಬಳಿಕ ಭಾರತದಲ್ಲಿ ಹೊಸ ಪ್ರಯಾಣ ಆರಂಭವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಸಂಸತ್ತಿನಲ್ಲಿ ರಾಮಮಂದಿರ ಪ್ರಸ್ತಾವನೆ ಕುರಿತ ಚರ್ಚೆಯಲ್ಲಿ ಮಾತನಾಡಿದ ಅಮಿತ್ ಶಾ, ಜನವರಿ 22 ರ ದಿನವು ಹತ್ತು ಸಾವಿರ ವರ್ಷಗಳ ಇತಿಹಾಸದಲ್ಲಿ ನೆನಪಿನಲ್ಲಿ ಇಡುವ ದಿನವಾಗಲಿದೆ. ರಾಮನಿಲ್ಲದ ದೇಶವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ರಾಮ ಮಂದಿರ ಸ್ಥಾಪನೆ ಅದೃಷ್ಟದ ವಿಚಾರವಾಗಿದ್ದು, ಈ ವಿಚಾರದಲ್ಲಿ ನಮ್ಮ ಪೀಳಿಗೆ ಅತ್ಯಂತ ಅದೃಷ್ಟಶಾಲಿಯಾಗಿದೆ ಎಂದರು.

ಸುಮಾರು 500 ವರ್ಷಗಳ ನಂತರ ಕಾನೂನು ಹೋರಾಟ ಕೊನೆಗೊಂಡಿದೆ. ಮೋದಿಯವರ ಕಾಲದಲ್ಲಿ ಈ ಕನಸು ನನಸಾಗಬೇಕಿತ್ತು. ರಾಮ ಮಂದಿರ ನಿರ್ಮಾಣಕ್ಕೆ ಧರ್ಮಕ್ಕೆ ಸಂಬಂಧ ಕಲ್ಪಿಸಬಾರದು. ರಾಮ ದೇಶದ ಜನರ ಆತ್ಮ. ರಾಮಾಯಣವನ್ನು ಹಲವು ದೇಶಗಳು ಒಪ್ಪಿಕೊಂಡಿವೆ. ನಾನು ರಾಮ ಮಂದಿರಕ್ಕಾಗಿ ಹೋರಾಡಿದ ಎಲ್ಲಾ ಯೋಧರನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!