ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಕಾಂಗ್ರೆಸ್ ತೊರೆಯುವ ನಿರ್ಧಾರವನ್ನು ಘೋಷಿಸಿದ ಹಿರಿಯ ಮುಖಂಡ ಬಾಬಾ ಸಿದ್ದಿಕಿ ಅವರು ಅಜಿತ್ ಪವಾರ್ ಅವರ ಪಕ್ಷ ಎನ್ ಸಿಪಿಗೆ ಸೇರಿದ್ದಾರೆ. ಶನಿವಾರ, ಅವರು ಕಾರ್ಯಕ್ರಮವೊಂದರಲ್ಲಿ ಅಧಿಕೃತವಾಗಿ ಎನ್ ಸಿಪಿಗೆ ಸೇರಿದರು.
ಈ ಸಂದರ್ಭದಲ್ಲಿ ಅಜಿತ್ ಪವಾರ್ ಮತ್ತು ಪ್ರಫುಲ್ ಪಟೇಲ್ ಉಪಸ್ಥಿತರಿದ್ದರು.
ಬಾಬಾ ಸಿದ್ದಿಕಿ ಅವರು 40 ವರ್ಷಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ನಲ್ಲಿದ್ದರು. ಅವರು ಟ್ವೀಟ್ ಮಾಡಿ ‘ವಿದಾಯ ಹೇಳುವ’ ಬಗ್ಗೆ ಕಾಂಗ್ರೆಸ್ ಗೆ ಮಾಹಿತಿ ನೀಡಿದ್ದಾರೆ.