ನೀವು ಎಷ್ಟೇ ದ್ವೇಷ ಹರಡಿದರೂ ಭಾರತೀಯರ ಡಿಎನ್‌ಎಯಲ್ಲಿಯೇ ಪ್ರೀತಿ ಇದೆ: ರಾಹುಲ್‌ ಗಾಂಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಆರ್‌ಎಸ್‌ಎಸ್‌ – ಬಿಜೆಪಿ ಎಷ್ಟೇ ದ್ವೇಷ ಹರಡಿದರೂ ಭಾರತೀಯರ ಡಿಎನ್‌ಎಯಲ್ಲಿಯೇ ಪ್ರೀತಿ ಇದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಎರಡು ದಿನದ ವಿರಾಮದ ನಂತರ ಛತ್ತೀಸಗಢದ ರಾಯಗಢದಿಂದ ಭಾರತ್‌ ಜೋಡೊ ನ್ಯಾಯ ಯಾತ್ರೆ ಆರಂಭಿಸಿ ಮಾತನಾಡಿದ ಅವರು, ಸದ್ಯ ದೇಶದ ಮೂಲೆ ಮೂಲೆಗಳಲ್ಲಿ ಹಿಂಸೆ ಹರಡುತ್ತಿದೆ. ಭಾಷೆ, ಜನಾಂಗದ ಆಧಾರದಲ್ಲಿ ಹಿಂಸೆ ಹರಡಲಾಗುತ್ತಿದೆ. ಇಂತಹ ಚಿಂತನೆಗಳು ದೇಶವನ್ನು ದುರ್ಬಲಗೊಳಿಸುತ್ತವೆ’ ಎಂದರು.

‘ಈ ದೇಶದಲ್ಲಿ ದ್ವೇಷಕ್ಕೆ ಜಾಗವಿಲ್ಲ. ಭಿನ್ನ ಚಿಂತನೆಗಳನ್ನು, ನಂಬಿಕೆಗಳನ್ನು ಹೊಂದಿರುವವರು ಒಟ್ಟಾಗಿ ಬಾಳುತ್ತಿದ್ದಾರೆ’ ಎಂದು ಹೇಳಿದರು.

ಈ ವೇಳೆ ಅಗ್ನಿಪಥ ಯೋಜನೆ ಕುರಿತು ಮಾತನಾಡಿದ ಅವರು, ಎಲ್ಲಾ ರೀತಿಯ ರಕ್ಷಣಾ ಗುತ್ತಿಗೆಗಳನ್ನು ಅದಾನಿಗೆ ನೀಡಲಾಗುತ್ತಿದೆ. ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದಕ್ಕೆ ನನ್ನ ಸದಸ್ಯತ್ವವನ್ನೇ ರದ್ದುಗೊಳಿಸಲಾಯಿತು. ಅಲ್ಲದೇ ನನ್ನ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ಹೇಳಲಾಯಿತು. ಜನರ ಹೃದಯದಲ್ಲಿ ವಾಸಿಸುವ ನನಗೆ ಮನೆಯ ಅಗತ್ಯವಿಲ್ಲ’ ಎಂದರು.

‘ರೈತರ ಆತ್ಮಹತ್ಯೆ, ಕಾರ್ಮಿಕರ ಪ್ರತಿಭಟನೆಗಳನ್ನು ತೋರಿಸದ ಮಾಧ್ಯಮಗಳು, ಅಂಬಾನಿ-ಅದಾನಿ ಮಕ್ಕಳ ಮದುವೆ, ವಿಶ್ವಕಪ್‌ ಪಂದ್ಯಗಳಂತಹ ವಿಷಯಗಳನ್ನಷ್ಟೇ ಬಿತ್ತರಿಸುತ್ತವೆ. ಜನರಿಗೆ ಸತ್ಯ ದರ್ಶನ ಮಾಡಲು, ಜನರ ಜೊತೆ ಸಂಪರ್ಕ ಜೋಡಿಸುವುದಕ್ಕೋಸ್ಕರವೇ ನಾನು ಈ ಯಾತ್ರೆ ಆರಂಭಿಸಬೇಕಾಯಿತು’ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!