ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಸಪ್ತಪದಿ ತುಳಿಯಲು ರೆಡಿಯಾಗಲಿದ್ದಾರೆ. ಬಾಲಿವುಡ್ ನಟ ಜಾಕಿ ಭಗ್ನಾನಿ ಜೊತೆ ನಟಿ ರಕುಲ್ ಹೊಸ ಜೀವನಕ್ಕೆ ಕಾಲಿಡಲು ನಿಶ್ಚಯಿಸಿದ್ದಾರೆ.
ವೆಡ್ಡಿಂಗ್ ಕಾರ್ಡ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಳಿ ಹಾಗೂ ಹಸಿರು ಥೀಮ್ ಹೊಂದಿರುವ ವೆಡ್ಡಿಂಗ್ ಕಾರ್ಡ್ ಇದಾಗಿದೆ. ಸುಂದರವಾದ ಸಮುದ್ರ ತೀರವಿರುವ ಡಿಸೈನ್ ಹೊಂದಿರುವ ಕಾರ್ಡ್ ಫೆಬ್ರವರಿ 21 ಎಂದು ಮದುವೆ ದಿನಾಂಕ ಪ್ರಕಟಿಸಲಾಗಿದೆ.
ಇನ್ನು ಇವರ ಮದುವೆ ಗೋವಾದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ. ಇದರ ಮೊದಲು ವಿದೇಶದಲ್ಲಿ ಮದುವೆ ನಡೆಯುವುದಾಗಿ ತಿಳಿಸಲಾಗಿತ್ತು. ಆದರೆ ಪ್ರಧಾನಿ ಮೋದಿ ಅವರು ವಿಶೇಷ ಸಂದರ್ಭಗಳನ್ನು ದೇಶದೊಳಗೆ ಆಚರಿಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಗೋವಾದಲ್ಲಿ ಮದುವೆಯಾಗಲು ನಿರ್ಧರಿಸಲಾಗಿದೆ.
ಮದುವೆ ಅದ್ದೂರಿಯಾಗಿ ನಡೆಯಲಿದ್ದು ಚಿತ್ರರಂಗದ ಹಲವು ಗಣ್ಯರು ಪಾಲ್ಗೊಳ್ಳುವ ಸಾಧ್ಯತೆ ಇದೆ.