ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ಸದ್ಗುರು ಜಗ್ಗಿ ವಾಸುದೇವ್ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ಈಶಾ ಫೌಂಡೇಶನ್ ಸ್ಥಾಪಕ, ಧಾರ್ಮಿಕ ಚಿಂತಕ ಶ್ರೀ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev, founder of Isha Foundation)​ ಭೇಟಿ ನೀಡಿದ್ದಾರೆ .

ಈ ವೇಳೆ ರಾಮಲಲಾನ ದರುಶನ ಪಡೆದ ಅವರು , ಕೈಕೆಲಕಾಲ ದೇವಾಲಯದ ಒಳಾಂಗಣದಲ್ಲಿ ಧ್ಯಾನಾಸಕ್ತರಾದರು. ರಾಮನಾಮ ಭಜಿಸಿದರು.

ಇದೇ ವೇಳೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾದರು.

ಸದ್ಯ 48 ದಿನಗಳ ಮಂಡಲ ಪೂಜೆಯಲ್ಲಿ ನಿರತರಾಗಿರುವ ಪೇಜಾವರ ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!