ಮೇಷ
ವೃತ್ತಿಯಲ್ಲಿ ನಿಮ್ಮ ಹೊಣೆಯನ್ನು ಸಮರ್ಥವಾಗಿ, ನಿಭಾಯಿಸುವಿರಿ. ಹಾಗಾಗಿ ಯಾವುದೇ ಸಮಸ್ಯೆ ಉದ್ಭವಿಸದು. ಸಾಂಸಾರಿಕ ಶಾಂತಿ.
ವೃಷಭ
ಮಾನಸಿಕ ಒತ್ತಡ. ಕೆಲಸದಲ್ಲಿ ಏಕಾಗ್ರತೆ ಕಡಿಮೆಯಾದೀತು. ಸಂಗಾತಿಯ ಜತೆಗೆ ಭಿನ್ನಮತ ಸಂಭವ. ಮಾತು- ಕೃತಿಯಲ್ಲಿ ಸಹನೆಯಿರಲಿ.
ಮಿಥುನ
ಹೆಚ್ಚಿನ ವಿಶೇಷಗಳಿಲ್ಲದ ದಿನ. ಕೌಟುಂಬಿಕ ಹೊಣೆಗಾರಿಕೆ ತುಸು ಹೆಚ್ಚಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸು ವುದು. ದೈಹಿಕ ಸಮಸ್ಯೆ ನಿವಾರಣೆ.
ಕಟಕ
ವೃತ್ತಿಪರ ಒತ್ತಡ ಹೆಚ್ಚು. ಮಾಡಿದ ಕೆಲಸ ಸರಿಯಾಗಿಲ್ಲವೆಂಬ ದೂರು ಕೇಳುವಿರಿ. ಇತರರ ಟೀಕೆಗೆ ತಲೆ ಕೆಡಿಸಿಕೊಳ್ಳಬೇಡಿ. ಆತ್ಮವಿಶ್ವಾಸವಿರಲಿ.
ಸಿಂಹ
ಆಪ್ತರ ಜತೆಗಿನ ವಿರಸವನ್ನು ಸಮಾಧಾನದಿಂದ ಪರಿಹರಿಸಿಕೊಳ್ಳಿ. ಹಣಕಾಸು ಸ್ಥಿತಿ ಉತ್ತಮ. ದೈಹಿಕ ಮತ್ತು ಮಾನಸಿಕ ನೆಮ್ಮದಿ.
ಕನ್ಯಾ
ಫಲಪ್ರದ ದಿನ. ಆತ್ಮವಿಶ್ವಾಸ ಹೆಚ್ಚಿ ಸುವ ಬೆಳವಣಿಗೆ. ಕಷ್ಟವೆಂದು ಕೊಂಡಿದ್ದ ಕಾರ್ಯವೊಂದು ಸುಲಭದಲ್ಲಿ ಮುಗಿಯಲಿದೆ.
ತುಲಾ
ಕೆಲಸದಲ್ಲಿ ಪ್ರಗತಿ. ಕಾರ್ಯ ನಿರ್ವಹಣೆ ಬಗ್ಗೆ ಮೇಲಧಿಕಾರಿ ಗಳಿಂದ ಮೆಚ್ಚುಗೆ. ಇತರರ ಪ್ರೋತ್ಸಾಹ
ವನ್ನು ಪಡೆಯುವಿರಿ. ಆರ್ಥಿಕ ಸುಧಾರಣೆ.
ವೃಶ್ಚಿಕ
ಆರ್ಥಿಕ ಸ್ಥಿತಿ ತೃಪ್ತಿಕರವೆನಿಸಲಿದೆ. ಉಳಿತಾಯದ ಅವಕಾಶವೂ ಲಭ್ಯ. ಕುಟುಂಬದಲ್ಲಿ ಸಂತೋಷದ ವಾತಾವರಣ.
ಧನು
ಆರಾಮವಾಗಿ ಇರಲು ಇಂದಿನ ದಿನ ಅವಕಾಶ ನೀಡುವುದಿಲ್ಲ. ಏನಾದರೊಂದು ಕಿರಿಕಿರಿ ಬಾಧಿಸಬಹುದು. ಗುರಿ ಸಾಧಿಸಲು ಧೈರ್ಯದ ಕೊರತೆಯೂ ಇದೆ.
ಮಕರ
ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಸೂಕ್ತ ದಿನ. ಎಲ್ಲವೂ ನಿಮಗೆ ಅನುಕೂಲಕರವಾಗಿ ನಡೆಯುವುದು. ಪ್ರೀತಿಪಾತ್ರರ ಜತೆ ಸಮಯ ಕಳೆಯುವಿರಿ.
ಕುಂಭ
ಕೆರಿಯರ್ಗೆ ಸಂಬಂಧಿಸಿ ಉತ್ತಮ ಅವಕಾಶಗಳು ಒದಗಲಿವೆ. ವೃತ್ತಿಯಲ್ಲಿ ನಿಮಗೆ ಅನುಕೂಲ ಕರವಾದ ಬೆಳವಣಿಗೆ. ಕೌಟುಂಬಿಕ ಶಾಂತಿ. ಆರ್ಥಿಕ ಸುಧಾರಣೆ.
ಮೀನ
ನಿಮ್ಮ ಕ್ಷಿಪ್ರ ನಿರ್ಧಾರ, ಕಾರ್ಯದಿಂದ ಒಳಿತಾ ಗಲಿದೆ. ಸಂಭಾವ್ಯ ಸಮಸ್ಯೆ ಪರಿಹಾರ ಕಾಣಲಿದೆ. ಇತರರ ಸಹಕಾರ ಪಡೆಯಲು ಸಫಲರಾಗುವಿರಿ.