ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲಿ ಕೇರಳ ಮೂಲದ ದಂಪತಿ, ಇಬ್ಬರು ಅವಳಿ ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.
ಕಳೆದ ಒಂಬತ್ತು ವರ್ಷದಿಂದ ಆನಂದ್ ಸುಜಿತ್ ಹೆನ್ರಿ ಹಾಗೂ ಪತ್ನಿ ಆಲಿಸ್ ಪ್ರಿಯಾಂಕ ಅಮೆರಿಕದಲ್ಲಿದ್ದರು. ನಾಲ್ಕು ವರ್ಷದ ಅವಳಿ ಮಕ್ಕಳ ಜೊತೆ ಅಮೆರಿಕದಲ್ಲಿ ಸೆಟಲ್ ಆಗಿದ್ದರು.
ಎಷ್ಟೇ ಕರೆ ಮಾಡಿದರೂ ಇವರು ಕರೆ ರಿಸೀವ್ ಮಾಡದ ಹಿನ್ನೆಲೆ ಪೊಲೀಸರಿಗೆ ಸಂಬಂಧಿಕರು ದೂರು ನೀಡಿದ್ದಾರೆ. ಪೊಲೀಸರು ಮನೆಗೆ ಬಂದು ನೋಡಿದಾಗ ಮೃತದೇಹ ಪತ್ತೆಯಾಗಿದೆ.
ಇಬ್ಬರು ಮಕ್ಕಳ ಮೃತದೇಹ ರೂಮ್‌ನಲ್ಲಿ ಹಾಗೂ ದಂಪತಿ ಮೃತದೇಹ ಬಾತ್‌ರೂಮ್‌ನಲ್ಲಿ ಪತ್ತೆಯಾಗಿದೆ. ದಂಪತಿ ದೇಹದ ಮೇಲೆ ಗುಂಡಿನ ಗುರುತುಗಳಿವೆ, ಆದರೆ ಮನೆಯೊಳಗೆ ಬೇರಾರೂ ಬಂದಿರುವಂತೆ ಕಾಣಿಸುತ್ತಿಲ್ಲ . ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಾಣಿಸುತ್ತಿದೆ. ಆದರೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.