ರಾಜ್ಯಸಭಾ ಚುನಾವಣೆ: ಗುಜರಾತಿನಿಂದ ಜೆಪಿ ನಡ್ಡಾ, ಮಹಾರಾಷ್ಟ್ರದಿಂದ ಅಶೋಕ್ ಚವಾಣ್ ಕಣಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಸಭಾ ಚುನಾವಣೆಗೆ ಗುಜರಾತ್‌ನಿಂದ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಹಾಗೂ ಮಾಹಾರಾಷ್ಟ್ರದಿಂದ ಇತ್ತಿಚೇಗೆ ಕಾಂಗ್ರೆಸ್​​​​ಗೆ ರಾಜೀನಾಮೆ ನೀಡಿ, ಬಿಜೆಪಿಗೆ ಬಂದಿದ್ದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ (Ashok Chavan) ಕಣಕ್ಕಿಳಿದಿದ್ದಾರೆ .

ನಡ್ಡಾ ಅವರು ಪ್ರಸ್ತುತ ಹಿಮಾಚಲ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಆಡಳಿತವಿರುವ ರಾಜ್ಯದಿಂದ ಏಕೈಕ ಸ್ಥಾನವನ್ನು ಗೆಲ್ಲಲು ಬಿಜೆಪಿಗೆ ಸಂಖ್ಯಾಬಲವಿಲ್ಲದ ಕಾರಣ ನಡ್ಡಾ ಅವರನ್ನು ಈ ಬಾರಿ ಗುಜರಾತ್​​​ನಿಂದ ಕಣಕ್ಕಿಳಿಸಲಿದೆ. ಇನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಚವಾಣ್ ಅವರು ನಿನ್ನೆ ತಾನೇ ಬಿಜೆಪಿಗೆ ಸೇರಿದರು. ಇಂದು ಅವರಿಗೆ ಮಹಾರಾಷ್ಟ್ರದಿಂದ ರಾಜ್ಯಸಭಾ ಟಿಕೆಟ್​​​ ನೀಡಲಾಗಿದೆ.

ಬಿಜೆಪಿ ರಾಜ್ಯಸಭಾ ಚುನಾವಣೆಗೆ ಗುಜರಾತ್​​ನಿಂದ ನಾಲ್ಕು ಜನರನ್ನು ಹಾಗೂ ಮಹಾರಾಷ್ಟ್ರದಿಂದ ಮೂರು ಜನರನ್ನು ಕಣಕ್ಕಿಳಿಸಿದೆ. ಗುಜರಾತ್​​ನಿಂದ ಜೆಪಿ ನಡ್ಡಾ, ಗೋವಿಂದಭಾಯ್ ಧೋಲಾಕಿಯಾ, ಮಾಯಾಂಕ್‌ಭಾಯ್ ನಾಯಕ್ ಮತ್ತು ಡಾ ಜಶ್ವಂತ್‌ಸಿನ್ಹ್ ಪರ್ಮಾರ್, ಮಹಾರಾಷ್ಟ್ರದಿಂದ ಅಶೋಕ್ ಚವಾಣ್, ಮೇಧಾ ಕುಲಕರ್ಣಿ ಮತ್ತು ಡಾ ಅಜಿತ್ ಗೋಪ್‌ಛಾಡೆ ಆಯ್ಕೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!