ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಅಭಿಮಾನಿಗಳ ನೆಚ್ಚಿನ ಡಿ ಬಾಸ್, ದಾಸ ದರ್ಶನ್ ಹುಟ್ಟುಹಬ್ಬ ನಾಳೆ ಅದ್ದೂರಿಯಾಗಿ ನಡೆಯಲಿದೆ. ಫೆ. 16 ಬಂತು ಅಂದ್ರೆ ದಾಸ ಅಭಿಮಾನಿಗಳಿಗೆ ದೊಡ್ಡ ಹಬ್ಬವೇ ಸರಿ, ಅವರ ಹುಟ್ಟುಹಬ್ಬದ ದಿನ ಮಾತ್ರವಲ್ಲದೆ ಮುಂಚಿನ ದಿನಗಳಲ್ಲೂ ಸಹ ದರ್ಶನ್ ಅವರ ಮನೆ ಮುಂದೆ ಅಭಿಮಾನಿಗಳ ಜನ ಸಾಗರವೇ ಹರಿದು ಬರುತ್ತದೆ.
ಇನ್ನು ನಾಳೆ ದರ್ಶನ್ ಹುಟ್ಟುಹಬ್ಬ ಇರುವ ಕಾರಣ ಅವರ ಸೆಲೆಬ್ರಿಟಿಸ್ ಗಳು ಈಗಾಗಲೇ ಕಾಮನ್ ಡಿಪಿ (CDP) ಅನ್ನೋ ಟ್ರೆಂಡ್ ಶುರು ಮಾಡಿದ್ದಾರೆ. “ನಿಮ್ ಅಪ್ಪನ ಹೆಸ್ರು ಉಳಿಸಬಿಟ್ಟೆ ಕಣಯ್ಯ” ಎಂಬ ಸಿಡಿಪಿ ಇದೀಗ ಫುಲ್ ಟ್ರೆಂಡಿಂಗ್ ಆಗ್ತಿದೆ. ಯಾವ ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರು ಈ ಸಿಡಿಪಿ ಕಾಣಸಿಗುತ್ತದೆ.
ನಾಳೆ ಹುಟ್ಟುಹಬ್ಬ ಇರುವ ಕಾರಣ ದರ್ಶನ್ ತಮ್ಮ ಸಂಪೂರ್ಣ ಸಮಯವನ್ನ ತಮ್ಮ ನೆಚ್ಚಿನ ಸೆಲೆಬ್ರಿಟಿಸ್ ಗಳಿಗೆ ಮುಡಿಪಾಗಿಡಲು ಬಯುಸುತ್ತಾರೆ. ಈ ಬಾರಿ ಯಾವ ರೀತಿ ದಾಸನ ಹುಟ್ಟುಹಬ್ಬ ನಡೆಯಲಿದೆ ಎಂಬುದು ನೋಡಬೇಕಿದೆ.
ಅಷ್ಟೇ ಅಲ್ಲದೆ, ಇದರ ಜೊತೆ ಇನ್ನೊಂದು ಸಂಭ್ರಮ ಎಂದರೆ ದಾಸ ದರ್ಶನ್ ಸ್ಯಾಂಡಲ್ವುಡ್ ಬಾಸ್ ಆಗಿ ಪಾದಾರ್ಪಣೆ ಮಾಡಿ 25 ವರ್ಷಗಳು ಪೂರ್ಣಗೊಳ್ಳಲಿದೆ. ಇನ್ನು ಈ ಸಂಭ್ರಮದಲ್ಲಿ ಇಡೀ ಚಿತ್ರರಂಗ ಪಾಲ್ಗೊಳ್ಳಲಿದೆ. ಅನೇಕ ತಾರೆಯರು ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.