May 2, 2026
Saturday, May 2, 2026
spot_img

ಪ್ರೀತಿ ಒಪ್ಪದಿದ್ದಕ್ಕೆ ರಕ್ತಪಾತ: ಯಲ್ಲಾಪುರದಲ್ಲಿ ಮುಗಿಲು ಮುಟ್ಟಿದ ಆಕ್ರೋಶ, ನಾಳೆ ಬಂದ್ ಗೆ ಕರೆ

ಹೊಸದಿಗಂತ ಯಲ್ಲಾಪುರ

ಕಾಳಮ್ಮ ನಗರದಲ್ಲಿ ಮುಸ್ಲಿಂ ವ್ಯಕ್ತಿಯಿಂದ ನಡೆದ ಹಿಂದೂ ಮಹಿಳೆಯ ಹತ್ಯೆಗೆ ಈಗ ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಭಾನುವಾರ ಯಲ್ಲಾಪುರ ಬಂದ್ ಗೆ ಕರೆ ನೀಡಲಾಗಿದೆ.

ರಾಮಾಪುರ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಂಜಿತಾ ಮಲ್ಲಪ್ಪ ಬನಸೋಡೆ (30)ಯನ್ನು
ರಫೀಕ ಇಮಾಮಸಾಬ ಯಳ್ಳೂರ (30) ಎಂಬಾತ ಪ್ರೀತಿಗೆ ಒಪ್ಪದ ಕಾರಣ ಹತ್ಯೆಗೈದಿರುವುದು ನಗರದಲ್ಲಿ ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಮಧ್ಯೆ ಘಟನಾ ಸ್ಥಳಕ್ಕೆ ಎಸ್‌.ಪಿ. ದೀಪನ್‌, ಎಂ.ಎನ್‌.,ಡಿ ವಾಯ ಎಸ್ ಪಿ ಗಳಾದ ಗೀತಾ ಪಾಟೀಲ,ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ., ತಪ್ಪಿತಸ್ಥರನ್ನು ಬಂಧಿಸಲು ತನಿಖೆ ನಡೆಸಲಾಗುತ್ತಿದೆ. ಆರೋಪಿಗೆ ಕಠಿಣ ಶಿಕ್ಷೆ ನೀಡಲಾಗುವುದು. ಅಲ್ಲಿಯವರೆಗೆ ಪಟ್ಟಣದಲ್ಲಿ ಕೋಮು ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಕೋರಿಕೊಂಡಿದ್ದಾರೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !