ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಶಾನ್ ಕಿಶನ್. ಟೀಂ ಇಂಡಿಯಾದ ಪ್ರತಿಭಾವಂತ ಆಟಗಾರ. ಅಲ್ಲದೆ ಸ್ಫೋಟಕ ಬ್ಯಾಟ್ಸ್ ಮ್ಯಾನ್. ಯಂಗ್ ವಿಕೆಟ್ ಕೀಪರ್. ಇದೀಗ ಈ ವಿಕೆಟ್ ಕೀಪರ್ ಭವಿಷ್ಯ ಅತಂತ್ರವಾಗಿದೆ. ಇದಕ್ಕೆಲ್ಲಾ ಕಾರಣ ಇಶಾನ್ ಕಿಶನ್ ಮಾಡಿರುವ ತಪ್ಪುಗಳಿಂದ ಇವತ್ತು ಅವರಿಗೆ ಈ ಪರಿಸ್ಥಿತಿ ಎದುರಾಗಿದೆ.
ಸೌತ್ ಆಫ್ರಿಕಾದಲ್ಲಿ ನಡೆದ ಸರಣಿಯಿಂದ ತಪ್ಪಿಸಿಕೊಂಡಿದ್ದ ಇಶಾನ್ ಇಂದು ಆ ತಪ್ಪುಗಳೇ ಅವರಿಗೆ ಮುಳುವಾಗ್ತಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಅವರು ಅದೇ ತಪ್ಪುಗಳನ್ನು ಮಾಡುತ್ತಲೇ ಬಿಸಿಸಿಐನ ಕೆಂಗಣ್ಣಿಗೆ ಗುರಿಯಾದರು. ಅವರೇ ತಮ್ಮ ಕೈಯಾರೆ ತಮ್ಮ ವೃತ್ತಿ ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಭಾಗವಹಿಸದ ಇಶಾನ್ ಅವರನ್ನು ರಣಜಿ ಟೂರ್ನಿಯಲ್ಲಿ ಪಾಲ್ಗೊಳ್ಳುವಂತೆ ಶಿಫಾರಸು ಮಾಡಲಾಗಿತ್ತು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಇಶಾನ್ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಇಐಪಿಎಲ್ ಫ್ರಿಪರೇಷನ್ನಲ್ಲಿ ಪಾಲ್ಗೊಂಡಿದ್ದರು. ಈ ಬಗ್ಗೆ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿದ್ದು, ಕಠಿಣ ಕ್ರಮ ಕೈಗೊಂಡಿದೆ. ರಣಜಿ ಆಡದಿದ್ದರೆ ಐಪಿಎಲ್ ಇಲ್ಲ ಎಂಬ ಸಂದೇಶ ರವಾನಿಸಿದ್ದಾರೆ.