ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ನೀಡುವ ಘೋಷಣೆ ಮಾಡಲಾಗಿದೆ.
ಇದು ಗ್ರಾಮೀಣ ಪತ್ರಕರ್ತರಿಗೆ ಮಾತ್ರ ಅನ್ವಯವಾಗುತ್ತದೆ. ಹಳ್ಳಿಗಳಿಂದ ನಿತ್ಯವೂ ಕೆಲಸಕ್ಕೆ ಆಗಮಿಸುವ, ರಿಪೋರ್ಟಿಂಗ್ ಬಸ್‌ನಲ್ಲಿ ತೆರಳಬೇಕಿದ್ದ ಪತ್ರಕರ್ತರಿಗೆ ಇದು ಸಂತಸದ ಸುದ್ದಿಯಾಗಿದೆ.