ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಮಾಜಿ ದೇವದಾಸಿಯರ ಮಾಸಾಶನ ಹೆಚ್ಚಳವಾಗುತ್ತದೆ ಎಂದು ಘೋಷಿಸಿದ್ದಾರೆ.
ಇದೀಗ ಮಾಜಿ ದೇವದಾಸಿಯರಿಗೆ ಪ್ರಸ್ತುತ 1,500 ರೂಪಾಯಿ ಮಾಸಾಶನವನ್ನು ನೀಡಲಾಗುತ್ತಿದ್ದು, ಇದನ್ನು 2,000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.
ಇನ್ನು ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಮೈತ್ರಿ ಯೋಜನೆಯಲ್ಲಿ ನೀಡುತ್ತಿರುವ 800 ರೂಪಾಯಿ ಮಾಸಾಶನವನ್ನು 1,200 ರೂಪಾಯಿಗೆ ಹೆಚ್ಚಳ ಮಾಡಲಾಗುತ್ತಿದೆ ಎಂದಿದ್ದಾರೆ.