ಹೊಸದಿಗಂತ ವರದಿ,ಕಲಬುರಗಿ:
ಒಕ್ಕೂಟ ವ್ಯವಸ್ಥೆ ಕುರಿತಾಗಿ ದೊಡ್ಡದಾಗಿ ಭಾಷಣ ಬಿಗಿಯುವ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಂಗಳೂರು ಮತ್ತು ಮೈಸೂರನ್ನು ಕೇಂದ್ರೀಕೃತ ಮಾಡಿಕೊಂಡು ಬಜೆಟ್ ಮಂಡನೆ ಮಾಡಿದೆ ಎಂದು ಬಿಜೆಪಿ ಮಹಾನಗರ ಘಟಕದ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯೆ ನೀಡಿದ ಅವರು, ಕಲಬುರಗಿ ಮಹಾನಗರಕ್ಕೆ ಕವಡೆ ಕಾಸು ಕೊಟ್ಟು, ಸಮಗ್ರ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಹೇಳಿದರು.
ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕ ಭಾಗವನ್ನು ಸಂಪೂರ್ಣವಾಗಿ ಮರೆತು, ವಿಶೇಷ ಅನುದಾನ ಮಾತ್ರ ಘೋಷಿಸಿ,ಬಾಕಿ ಅಭಿವೃದ್ಧಿಯನ್ನು ಅದರಲ್ಲೆ ಮುಂದುವರೆಸಿ ಎಂದು ಸಾಮಾಜಿಕ ನ್ಯಾಯವನ್ನು ಮರೆತಿದೆ ಎಂದು ತಿಳಿಸಿದರು.
ಪಂಚ್ ಗ್ಯಾರಂಟಿಗಳ ಗುಂಗಿನಲ್ಲಿ ರೈತರನ್ನು ಮರೆತಿರುವುದು ದೊಡ್ಡ ದುರಂತ ಸರಿ. ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎನ್ನುವಂತೆ ಬಜೆಟ್ ನೀಡಿದ್ದು,ಜನರ ಆರ್ಥಿಕ ಶಕ್ತಿಯನ್ನು ಕುಂದಿಸುವ ದೂರದೃಷ್ಟಿ ಇಲ್ಲದ ಬಜೆಟ್ ಇದಾಗಿದೆ ಎಂದು ತಿಳಿಸಿದ್ದಾರೆ.