ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಶಾಲೆಗಳಲ್ಲಿ ಇನ್ನು ವಾಟರ್ ಬೆಲ್ ಕೇಳಿಸಲಿದೆ!
ಹೌದು, ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಸಾಕಷ್ಟು ನೀರು ಕುಡಿಯುವುದನ್ನು ಖಚಿತಪಡಿಸಿಕೊಳ್ಳಲು ಶಾಲಾ ಅವಧಿಯಲ್ಲಿ ನೀರುಕುಡಿಯಲು ಬಿಡುವು ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ನೀರು ಕುಡಿಯಲು ಇನ್ನು ಐದು ನಿಮಿಷಗಳ ವಿರಾಮ ನೀಡಲಾಗುತ್ತಿದ್ದು, ಬೆಳಗ್ಗೆ 10:30ಕ್ಕೆ ಹಾಗೂ ಮಧ್ಯಾಹ್ನ 2 ಗಂಟೆಗೆ ವಾಟರ್ ಬೆಲ್ ಬಾರಿಸಲಾಗುತ್ತದೆ. ಅ ಅವಧಿಯಲ್ಲಿ ಮಕ್ಕಳು ನೀರು ಕುಡಿಯಬೇಕಿದೆ.
ಈ ನಡುವೆ ಶಾಲಾ ವಾರ್ಷಿಕ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು, ಇದಕ್ಕೂ ಮುನ್ನವೇ ಮಕ್ಕಳ ಆರೋಗ್ಯದ ಮೇಲೆ ಕಾಳಜಿ ವಹಿಸಿರುವ ಇಲಾಖೆ ಶಾಲೆಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಮಧ್ಯಂತರಗಳ ಜೊತೆಗೆ ಈ ಹೊಸ ಮಧ್ಯಂತರವನ್ನು ಅನುಮತಿಸಿ ಆದೇಶ ನೀಡಲಿದೆ.