ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರದ ಭಾರತ್ ಅಕ್ಕಿಗೆ ಪರ್ಯಾಯವಾಗಿ ಕೆ-ರೈಸ್ ತರಲು ಕೇರಳ ಸರ್ಕಾರ ಮುಂದಾಗಿದೆ.
ಈ ಬಗ್ಗೆ ಸಾಧಕ ಬಾಧಕ ವರದಿಯನ್ನು ವಾರದೊಳಗೆ ಸಲ್ಲಿಸುವಂತೆ ಆಹಾರ ಸಚಿವ ಜಿ.ಆರ್.ಅನಿಲ್, ನಾಗರಿಕ ಸರಬರಾಜು, ಸಪ್ಲೈಕೋ ನಿರ್ದೇಶಕರಿಗೆ ಹಾಗೂ ಆಹಾರ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಪಡಿತರ ಅಂಗಡಿಯ ಮೂಲಕ ಈಗಾಗಲೇ ಅಕ್ಕಿ ವಿತರಿಸಲಾಗುತ್ತಿದೆ. ಆದರೆ ಇಲ್ಲಿ ಸಾಕಷ್ಟು ಅಕ್ಕಿ ಪಡೆಯಲು ಸಾಧ್ಯವಾಗದ ಬಿಳಿ ಮತ್ತು ನೀಲಿ ಪಡಿತರ ಚೀಟಿದಾರರಿಗೆ ಈ ಪರ್ಯಾಯ ಅಕ್ಕಿಯನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ.
ಬೇರೆ ರಾಜ್ಯಗಳಿಂದ ಕಡಿಮೆ ಬೆಲೆಗೆ ಜಯ ಅಕ್ಕಿ ತರಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಕೇರಳದ ರೈತರಿಂದ ಮಟ್ಟ ಮತ್ತು ಕುರುವಾ ಖರೀದಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಈ ಅಕ್ಕಿಯನ್ನು ಸಪ್ಲೈಕೋ ಮೂಲಕ ವಿತರಿಸಲು ಉದ್ದೇಶಿಸಲಾಗಿದೆ.