ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಮತ್ತೆ ಚಿಂತೆ ಮೂಡಿಸುವ ಹಂತ ತಲುಪಿದೆ. ಇಂದಿನ ವಾಯು ಗುಣಮಟ್ಟ ಸೂಚ್ಯಂಕ (AQI) 164 ದಾಖಲಾಗಿದ್ದು, ಇದು ‘ಅನಾರೋಗ್ಯಕರ’ ವರ್ಗಕ್ಕೆ ಸೇರಿದೆ. ಕಳೆದ ಕೆಲವು ದಿನಗಳಿಗಿಂತ ಸ್ವಲ್ಪ ಸುಧಾರಣೆ ಕಂಡುಬಂದಿದ್ದರೂ, ವಿಶ್ವ ಆರೋಗ್ಯ ಸಂಸ್ಥೆ (WHO) ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿ ಆರೋಗ್ಯಕ್ಕೆ ಹಾನಿಕರವಾಗಿಯೇ ಪರಿಗಣಿಸಲಾಗಿದೆ. ಇಂದಿನ PM2.5 ಪ್ರಮಾಣ 74 ಇದ್ದರೆ, PM10 ಮಟ್ಟ 101 ಆಗಿದೆ.
ನಗರದ ಹಲವು ಭಾಗಗಳಲ್ಲಿ ಗಾಳಿಯ ಗುಣಮಟ್ಟ ಇನ್ನಷ್ಟು ಹದಗೆಟ್ಟಿರುವುದು ವರದಿಯಾಗಿದೆ. ಕಲ್ಯಾಣ ನಗರದಲ್ಲಿ AQI ಮಟ್ಟವು ಆಗಾಗ್ಗೆ 170 ದಾಟುತ್ತಿದ್ದು, ಇದು ಅತ್ಯಂತ ಕಳಪೆ ಗಾಳಿ ಇರುವ ಪ್ರದೇಶಗಳಲ್ಲೊಂದು ಎನ್ನಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಭಾರೀ ವಾಹನ ಸಂಚಾರದಿಂದ ನೈಟ್ರೋಜನ್ ಡೈಆಕ್ಸೈಡ್ ಹಾಗೂ ಧೂಳಿನ ಕಣಗಳ ಪ್ರಮಾಣ ಹೆಚ್ಚಾಗಿದೆ. ವೈಟ್‌ಫೀಲ್ಡ್ ಹಾಗೂ ಐಟಿಪಿಎಲ್ ಪ್ರದೇಶಗಳಲ್ಲಿ ನಿರಂತರ ನಿರ್ಮಾಣ ಕಾಮಗಾರಿಗಳು ಮತ್ತು ಟ್ರಾಫಿಕ್ ಸಮಸ್ಯೆಗಳು ಗಾಳಿಯನ್ನು ‘ಅನಾರೋಗ್ಯಕರ’ ಮಟ್ಟಕ್ಕೆ ತಳ್ಳಿವೆ.
ಇದನ್ನೂ ಓದಿ: Rice series 45 | ಒನ್ ಪಾಟ್ ರೆಸಿಪಿ ಕಡಿ ಚಾವಲ್: ಬ್ಯುಸಿ ಮಾರ್ನಿಂಗ್ ಗೆ ಬೆಸ್ಟ್ ಬ್ರೇಕ್ ಫಾಸ್ಟ್!
ರಾಜ್ಯದ ಇತರ ನಗರಗಳಲ್ಲೂ ಗಾಳಿಯ ಗುಣಮಟ್ಟ ಮಿಶ್ರ ಸ್ಥಿತಿಯಲ್ಲಿದೆ. ಇಂದು ಬೆಂಗಳೂರು ಮತ್ತು ಮಂಗಳೂರು 164, ಮೈಸೂರು 134, ಬೆಳಗಾವಿ 160, ಕಲಬುರ್ಗಿ 127, ಶಿವಮೊಗ್ಗ 170, ಬಳ್ಳಾರಿ 200, ಹುಬ್ಬಳ್ಳಿ 104, ಉಡುಪಿ 160 ಹಾಗೂ ವಿಜಯಪುರ 97 AQI ದಾಖಲಾಗಿವೆ.

