ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ನಟ ವರುಣ್ ಧವನ್ ದಂಪತಿ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಣೆ ಮಾಡಿದ್ದಾರೆ.
ಅವರ ಪತ್ನಿ ನತಾಶಾ ದಲಾಲ್ ಗರ್ಭಿಯಾಗಿರುವ ಸುದ್ದಿಯನ್ನು ವರುಣ್ ಧವನ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಸ್ಟೂಡೆಂಟ್ ಆಫ್ ದಿ ಇಯರ್ ಹಾಗೂ ಬದ್ರೀನಾಥ್ ಕಿ ದುಲ್ಹನಿಯಾ ಚಿತ್ರಗಳಲ್ಲಿ ನಟಿಸಿರುವ ವರುಣ್ ಧವನ್, ನತಾಶಾ ಅವರೊಂದಿಗೆ ತಂದೆ ಆಗುವ ಜರ್ನಿಯನ್ನು ಸಂಭ್ರಮದಿಂದ ಅನುಭವಿಸಲಿದ್ದೇನೆ ಎಂದು ಹೇಳಿದ್ದಾರೆ.
ನತಾಶಾ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿರುವ ವರುಣ್ ಧವನ್, ‘ನಾವು ಗರ್ಭಿಣಿಯರಾಗಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ಹಾಗೂ ಪ್ರೀತಿ ನಮಗೆ ಅಗತ್ಯವಿದೆ’ ಎಂದು ಬರೆದುಕೊಂಡಿದ್ದು, ನನ್ನ ಕುಟುಂಬ ನನ್ನ ಶಕ್ತಿ ಎನ್ನುವ ಹ್ಯಾಶ್ಟ್ಯಾಗ್ ಬಳಸಿದ್ದಾರೆ.