ಹೊಸದಿಗಂತ ವರದಿ, ಹಾಸನ :
ಆಹಾರ ಅರಸಿ ಮುಂಜಾನೆ ವೇಳೆ ಗ್ರಾಮಕ್ಕೆ ಎಂಟ್ರಿ ಕೊಟ್ಟಿರುವ ಕಾಡಾನೆಯೊಂದ ಮನೆಯ ಮುಂದೆ ಇದ್ದ ವಿದ್ಯುತ್ ಕಂಬವನ್ನು ಮನೆಯಲ ಮೇಲೆ ಬೀಳಿಸಿದ್ದು ಭಾರಿ ಅನಾಹುತವೊಂದು ತಪ್ಪಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಬೆಳಗೋಡು ಹೋಬಳಿ ಶಿಡಗಳಲೆ ಗ್ರಾಮದಲ್ಲಿ ನಡೆದಿದೆ.
ಮಲ್ಲಿಕಾರ್ಜುನ್ ಎಂಬುವವರ ಮನೆಯ ಮುಂಭಾಗ ವಿದ್ಯುತ್ ಕಂಬದ ಮೂಲಕ 440 ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ತಂತಿ ಹಾದು ಹೋಗಿದ್ದು ಇಂದು ಮುಂಜಾನೆ ಶಿಡಗಳಲೆ ಗ್ರಾಮಕ್ಕೆ ಬಂದಿರುವ ಕಾಡಾನೆ ಮಲ್ಲಿಕಾರ್ಜುನ್ ಮನೆಯ ಮುಂದೆ ಇದ್ದ ವಿದ್ಯುತ್ ಕಂಬವನ್ನು ವಾಸದ ಮನೆಯ ಮೇಲೆ ಉರುಳಿಸಿದ್ದು, ಕಂಬ ಮನೆಯ ಮೇಲೆ ಬೀಳುತ್ತಿದ್ದಂತೆ ಕಡಿತಗೊಂಡ ವಿದ್ಯುತ್ ಸಂಪರ್ಕ ಕಡಿಗೊಂಡಿದೆ.
ಇದರಿಂದಾಗಿ ತಪ್ಪಿದ ದೊಡ್ಡ ದುರಂತ ತಪ್ಪಿದಂತಾಗಿದ್ದು ಕಂಬ ಬಿದ್ದ ಶಬ್ದಕ್ಕೆ ಮಲ್ಲಿಕಾರ್ಜನ್ ಕುಟುಂಬಸ್ಥರು ಗಾಬರಿಗೊಂಡು ಮನೆಯ ಕಿಟಕಿಯಿಂದ ನೋಡಿದ್ದಾರೆ. ಈ ವೇಳೆ ಕಾಡಾನೆ ಮನೆಯ ಮುಂಭಾಗವೇ ನಿಂತಿದ್ದು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಹೆಬ್ಬನಹಳ್ಳಿ, ಹೊಸಕೊಪ್ಪಲು, ಮಾಸುವಳ್ಳಿ ಭಾಗದಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಅಪಾರ ಪ್ರಮಾಣದ ಬೆಳೆ ನಾಶ ಮಾಡುವ ಜೊತೆಗೆ ವಾಸದ ಮನೆಗಳ ಮೇಲೂ ದಾಳಿ ಮಾಡುತ್ತಿವೆ. ಇದರಿಂದಾಗಿ ಗ್ರಾಮಸ್ಥರುಗಳು ಭಯಭೀತರಾಗಿದ್ದು ಕಾಡಾನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡಬೇಕು ಹಾಗೂ ಮುರಿದು ಬಿದ್ದಿರುವ ವಿದ್ಯುತ್ ಕಂಬವನ್ನು ದುರಸ್ತಿ ಮಾಡುವಂತೆ ಒತ್ತಾಯಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.