ಬೈಕ್‌ಗೆ ಹಿಂಬದಿಯಿಂದ ಬಂದು ಕಾರ್ ಡಿಕ್ಕಿ: ದಂಪತಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಸನದ ಚನ್ನರಾಯಪಟ್ಟಣದ ಬರಗೂರು ಹ್ಯಾಂಡ್‌ಪೋಸ್ಟ್ ಬಳಿ ಕಾರು-ಬೈಕ್ ನಡುವೆ ಅಪಘಾತವಾಗಿದ್ದು, ಬೈಕ್‌ನಲ್ಲಿದ್ದ ದಂಪತಿ ಮೃತಪಟ್ಟಿದ್ದಾರೆ.

ಚಂದ್ರೇಗೌಡ ಹಾಗೂ ಹೇಮಲತಾ ಮದುವೆ ಮುಗಿಸಿ ಚನ್ನರಾಯಪಟ್ಟಣಕ್ಕೆ ವಾಪಾಸಾಗುತ್ತಿದ್ದರು. ಈ ವೇಳೆ ತಿರುವಿನಲ್ಲಿ ಓವರ್‌ಸ್ಪೀಡ್‌ನಲ್ಲಿದ್ದ ಕಾರ್ ಬೈಕ್‌ಗೆ ಗುದ್ದಿದೆ.

ಗುದ್ದಿದ ರಭಸಕ್ಕೆ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚನ್ನರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!