ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಪುಣೆಯ ಕುರ್ಕುಂಭ್‌ನ ಗೋಡೌನ್ ನಲ್ಲಿ 2,200 ಕೋಟಿ ರೂಪಾಯಿ ಮೌಲ್ಯದ 1,100 ಕೆಜಿ ಮೆಫೆಡ್ರೋನ್ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದ ಪುಣೆಯಲ್ಲಿ ಪೊಲೀಸರು ಪ್ರಮುಖ ಮಾದಕ ವಸ್ತು ಕಳ್ಳಸಾಗಣೆ ಜಾಲವನ್ನು ಭೇದಿಸಿದ್ದು, 2.2 ಕೋಟಿ ಮೌಲ್ಯದ 1,100 ಕೆಜಿ ಮೆಫೆಡ್ರೋನ್ ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಐವರನ್ನು ಬಂಧಿಸಲಾಗಿದ್ದು. ಪುಣೆ ಮೂಲದ ಅರ್ಥ್ ಕೆಮ್ ಪ್ರೈವೇಟ್ ಲಿಮಿಟೆಡ್ ಫಾರ್ಮಾ ಪ್ಲಾಂಟ್‌ನಿಂದ 1,400 ಕೋಟಿ ರೂಪಾಯಿ ಮೌಲ್ಯದ 700 ಕೆಜಿ ಎಂಡಿ ಮತ್ತು ದೆಹಲಿಯಿಂದ 800 ಕೋಟಿ ರೂಪಾಯಿ ಮೌಲ್ಯದ 400 ಕೆಜಿ ಸಿಂಥೆಟಿಕ್ ಡ್ರಗ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.