ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನು ಮುಂದೆ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯವು ವಿವಾದಾತ್ಮಕ ನಿರ್ದೇಶನವನ್ನು ಹೊರಡಿಸಿದ್ದು, ನಾಡಗೀತೆ ಹಾಡುವುದಕ್ಕೆ ಖಾಸಗಿ ಶಾಲೆಗಳಿಗೆ ಸರ್ಕಾರ ವಿನಾಯಿತಿ ನೀಡಿದೆ. ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳಲ್ಲಿ ಮಾತ್ರ ನಾಡಗೀತೆಯನ್ನು ಹಾಡಬಹುದು ಎಂದು ಹೇಳಿದೆ.
ಈ ಹಿಂದೆ, ಎಲ್ಲಾ ಶಾಲೆಗಳು ತಮ್ಮ ದೈನಂದಿನ ಚಟುವಟಿಕೆಗಳನ್ನು ಪ್ರಾರಂಭಿಸುವ ಮೊದಲು ನಾಡಗೀತೆಯನ್ನು ಹಾಡಬೇಕಾಗಿತ್ತು. ಕಚೇರಿಗಳು, ಇಲಾಖೆಗಳು, ಅಧಿಕಾರಿಗಳು ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಅಧಿಕೃತ ಕಾರ್ಯಕ್ರಮಗಳನ್ನು ನಡೆಸುವ ಮೊದಲು ನಾಡಗೀತೆ ಹಾಡಬೇಕು ಎಂದು ಹೇಳಲಾಗಿತ್ತು.
ರಾಜ್ಯ ಸರ್ಕಾರ ಹಿಂದಿನ ಆದೇಶವನ್ನು ಬದಲಿಸಿ ಈಗ ಎಲ್ಲಾ ಶಾಲೆಗಳ ಬದಲಾಗಿ ಸರ್ಕಾರಿ ಶಾಲೆ ಎಂದು ಆದೇಶವನ್ನು ಬದಲಾಯಿಸಿದೆ.