ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲವು ವರ್ಷಗಳಿಂದ ಆಲ್ ಇಂಡಿಯಾ ರೇಡಿಯೋದಲ್ಲಿ ಕೇಳಿ ಬರುತ್ತಿದ್ದ ಅಮೀನ್ ಸಯಾನಿ ಅವರ ಧ್ವನಿ ಇನ್ನು ಮುಂದೆ ಕೇಳುವುದಿಲ್ಲ.
ಅಮೀನ್ ಸಯಾನಿ ಅವರಿಗೆ 91 ವರ್ಷವಾಗಿದ್ದು, ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆ ತಡರಾತ್ರಿ ಹೃದಯಾಘಾತವಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ತಂದೆ ಉಳಿಯಲಿಲ್ಲ ಎಂದು ಪುತ್ರ ರಾಜಿಲ್ ಸಯಾನಿ ಹೇಳಿದ್ದಾರೆ.
ನಮಸ್ಕಾರ್ ಭಾಯಿಯೋ ಔರ್ ಬೆಹ್ನೋ, ಮೇ ಆಪ್ಕಾ ದೋಸ್ಟ್ ಅಮೀನ್ ಸಯಾನಿ ಬೋಲ್ ರಹಾ ಹು ಎಂದು ರೇಡಿಯೋದಲ್ಲಿ ಸಯಾನಿ ಅವರ ಮಾತು ಆರಂಭವಾಗುತ್ತಿತ್ತು. ಒಟ್ಟಾರೆ 54 ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳಿಗೆ ದನಿಯಾಗಿದ್ದ ಸಯಾನಿ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.