ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಬುಲ್ಘಾನ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಸಾದ ಸೇವಿಸಿದ 300 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.
ಲೋನಾರ್‌ನ ಸೋಮನಾಥ ಗ್ರಾಮದಲ್ಲಿ ನಡೆದ ಹರಿಣಂ ಸಪ್ತಾಹದ ಕಡೆಯ ದಿನದಂದು ಪ್ರಸಾದ ಸೇವಿಸಿ ಜನರು ಅಸ್ವಸ್ಥರಾಗಿದ್ದಾರೆ. ಸ್ಥಳೀಯ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆಯಾಗಿದ್ದು, ಆಸ್ಪತ್ರೆಯ ಹೊರಗೂ ಚಿಕಿತ್ಸೆ ನೀಡಲಾಗುತ್ತಿದೆ.
ಹೊಟ್ಟೆನೋವು, ವಾಕರಿಕೆ ಹಾಗೂ ವಾಂತಿಯಿಂದ ಪ್ರಸಾದ ಸೇವಿಸಿದವರು ಬಳಲಿದ್ದಾರೆ. ಜಾಗದ ಕೊರತೆಯಿಂದಾಗಿ ಮರಗಳಿಗೆ ಕೊಕ್ಕೆ ಹಾಕಿ ಹಗ್ಗಗಳ ಮೇಲೆ ಸಲೈನ್ ಬಾಟಲಿಗಳನ್ನು ಅಳವಡಿಸಲಾಗಿದೆ.