ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಬೆ ಮಿಠಾಯಿಯಲ್ಲಿ ಕ್ಯಾನ್ಸರ್ಕಾರಕ ಅಂಶ ಪತ್ತೆಯಾಗಿದೆ!
ಬಾಯಲ್ಲಿಟ್ಟರೆ ಕರಗಿ ನಾಲಗೆಯಲ್ಲಾ ಪಿಂಕ್ ಬಣ್ಣಕ್ಕೆ ತಿರುಗುವಂತೆ ಮಾಡುವ ರೋಡಮೈನ್ ಬಿ ಅಂಶ, ಕ್ಯಾನ್ಸರ್ಕಾರಕವಾಗಿದೆ.
ಈಗಾಗಲೇ ಪುದುಚೇರಿ, ತಮಿಳುನಾಡು ಸರ್ಕಾರ ಕಾಟನ್ ಕ್ಯಾಂಡಿ ಉತ್ಪಾದನೆ ಹಾಗೂ ಮಾರಾಟವನ್ನು ನಿಷೇಧಿಸಿದೆ. ಇದೀಗ ಕರ್ನಾಟಕವೂ ಕಾಟನ್ ಕ್ಯಾಂಡಿ ಮಾದರಿಗಳನ್ನು ಸಂಗ್ರಹಿಸುತ್ತಿದೆ. ಇದರಲ್ಲಿ ರೋಡಮೈನ್ ಬಿ ಅಂಶ ಪತ್ತೆಯಾದರೆ ರಾಜ್ಯದಲ್ಲಿಯೂ ಕಾಟನ್ ಕ್ಯಾಂಡಿ ಬ್ಯಾನ್ ಆಗಲಿದೆ.
ರೋಡಮೈನ್ ಬಿ ಬಣ್ಣ ಬರಿಸಲು ಬಳಸಲಾಗುತ್ತದೆ. ಕಾಟನ್ ಕ್ಯಾಂಡಿ ಅಷ್ಟೇ ಅಲ್ಲ, ಜೆಲ್ಲಿ ಹಾಗೂ ಚಾಕೋಲೆಟ್ಗಳಲ್ಲಿಯೂ ಇದನ್ನು ಬಳಸಲಾಗುತ್ತದೆ. ಪ್ಯಾಕ್ ಮಾಡಿದ ಖಾರದಪುಡಿಯಲ್ಲಿ ಬಣ್ಣಕ್ಕಾಗಿ ಈ ಅಂಶವನ್ನು ಬಳಸಲಾಗುತ್ತದೆ.