ಹೊಸದಿಗಂತ ವರದಿ, ಕಲಬುರಗಿ:
ದೇಶದಲ್ಲಿ ಕಾಂಗ್ರೆಸ್ ಪಕ್ಷ ವಿನಾಶದ ಅಂಚಿನ ತುದಿಗಾಲಿಗೆ ಬಂದು ತಲುಪಿದ್ದು, ಮುಂಬರುವ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಸಂಪೂರ್ಣವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಬುಧವಾರ ಮಧ್ಯಾಹ್ನ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿತೇ ಸತ್ತರ ಸಾಲಿನಲ್ಲಿ ಕಾಂಗ್ರೆಸ್ ದೇಶ ಹಾಗೂ ರಾಜ್ಯ ಎರಡನ್ನೂ ನಾಶ ಮಾಡಿದೆ. ರಾಜ್ಯದಲ್ಲಿ ಬಲೇ ಹಿ ಕಾಂಗ್ರೆಸ್ ಅಧಿಕಾರದಲ್ಲಿ ಇರಬಹುದು.ಆದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಾಜಪಾ ೨೮ ಸ್ಥಾನಕ್ಕೆ ೨೮ ಸ್ಥಾನಗಳನ್ನು ಗೆಲ್ಲುವ ಮೂಲಕ, ೩೭೦ ಸ್ಥಾನ, ಎನ್.ಡಿ.ಎ. ೪೦೦ ಸ್ಥಾನಗಳನ್ನು ಪಾರು ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳ್ತಾರೆ, ಕಲಬುರಗಿಯ ಪರ ಕ್ಯಾಪಿಟಲ್ ಇನ್ ಕಂ(ಆದಾಯ) ಕಡಿಮೆಯಿದೆ ಎಂದು, ಕಳೆದ ೫೫ ವರ್ಷಗಳಿಂದ ಕಲಬುರಗಿಯಲ್ಲೆ ಇದ್ದಾರೆ.ಏನ್ ಅಭಿವೃದ್ಧಿ ಮಾಡಿದ್ದಾರೆ ತಿಳಿಸಲಿ ಎಂದು ಪ್ರಶ್ನಿಸಿದ ಅವರು, ಕಲಬುರಗಿಯನ್ನು ಬರ್ಬಾದ್ ಮಾಡಿದ್ದಾರೆ ಎಂದು ಹೇಳಿದರು.
ಇಡೀ ವಿಶ್ವಕ್ಕೆ ಲೋಕತಂತ್ರವನ್ನು ಪರಿಚಯಿಸಿದ ಈ ಭಾಗದಲ್ಲಿ ನಾನು ಇಂದೂ ಆಗಮಿಸಿ ಪಾವನವಾಗಿದ್ದೇನೆ. ನಮ್ಮ ಪಕ್ಷ ಮುಂಬರುವ ಲೋಕಸಭಾ ಚುನಾವಣೆ ತಯಾರಿಯಲ್ಲಿ ತೊಡಗಿದ್ದು, ಮಹಾತ್ಮಾ ಗಾಂಧೀಜಿ ಅವರ ಕನಸಿನಂತೆ ಕಾಂಗ್ರೆಸ್ ಡಿಜಾಲ್ವ್ ಮಾಡಬೇಕೆಂಬುದು ಇತ್ತು. ಆ ಸಂಕಲ್ಪವನ್ನು ಈಗ ಇಡೀ ದೇಶದ ಜನರು ಮಾಡಿದ್ದು, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಸರ್ವನಾಶ ಆಗಲಿದೆ ಎಂದರು.
ಕಾಂಗ್ರೆಸ್ ಸರ್ವನಾಶ ಆಗುವ ಕೆಲಸ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ನೇತೃತ್ವದಲ್ಲೆ ಆಗಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.