ಭಯೋತ್ಪಾದನೆ ವಿರುದ್ಧದ ಹೋರಾಟ ಭಾರತ-ಗ್ರೀಸ್ ಆದ್ಯತೆ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಾರತ ಮತ್ತು ಗ್ರೀಸ್‌ ಬುಧವಾರ ವ್ಯಾಪಾರ, ರಕ್ಷಣಾ ಉತ್ಪಾದನೆ, ವಲಸೆ ಮತ್ತು ಸಂಚಾರ ವಲಯಕ್ಕೆ ಸಂಬಂಧಿಸಿ ಶೀಘ್ರವೇ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಗ್ರೀಸ್‌ ಪ್ರಧಾನಿ ಕೈರಿಯಾಕೋಸ್ ಮಿತ್ಸೋಟಾಕಿಸ್ ನಡುವಿನ ಸುದೀರ್ಘ ಮಾತುಕತೆಯ ಸಂದರ್ಭ ಸಹಕಾರದ ವಿಸ್ತರಣೆಯು ಪ್ರಮುಖವಾಗಿ ಪ್ರಸ್ತಾಪವಾಯಿತು.

ಮಿತ್ಸೋಟಾಕಿಸ್ ಅವರು ಭಾರತಕ್ಕೆ ಎರಡು ದಿನಗಳ ಭೇಟಿ ಕೈಗೊಂಡಿದ್ದಾರೆ. 15 ವರ್ಷಗಳ ನಂತರ ಗ್ರೀಸ್‌ ದೇಶದ ಪ್ರಧಾನಿ ಭಾರತಕ್ಕೆ ಬಂದಿರುವುದು ಇದೇ ಮೊದಲು.

‘ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಗ್ರೀಸ್ ಸಮಾನ ಕಾಳಜಿ ಮತ್ತು ಆದ್ಯತೆಗಳನ್ನು ಹೊಂದಿವೆ. ಭಯೋತ್ಪಾದನೆ ಎದುರಿಸುವಲ್ಲಿ ನಮ್ಮ ಸಹಕಾರವನ್ನು ಇನ್ನಷ್ಟು ಬಲಪಡಿಸುವುದು ಹೇಗೆ ಎನ್ನುವ ಬಗ್ಗೆಯೂ ವಿಸ್ತೃತವಾಗಿ ಚರ್ಚಿಸಿದ್ದೇವೆ’ ಎಂದು ಪ್ರಧಾನಿ ಮೋದಿ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ವಲಸೆ ಮತ್ತು ಸಾರಿಗೆ ಸೌಲಭ್ಯದ ಪಾಲುದಾರಿಕೆ ದೃಢಪಡಿಸುವ, ಕೃಷಿ ವಲಯದಲ್ಲಿ ಉಭಯ ರಾಷ್ಟ್ರಗಳ ಸಹಕಾರ ವಿಸ್ತರಿಸುವ ಬಗ್ಗೆಯೂ ವ್ಯಾಪಕವಾಗಿ ಚರ್ಚಿಸಿದ್ದೇವೆ. ಹಾಗೆಯೇ, ಎಲ್ಲ ವಿವಾದಗಳು ಮತ್ತು ಬಿಕ್ಕಟ್ಟುಗಳನ್ನು ಮಾತುಕತೆ, ರಾಜತಾಂತ್ರಿಕತೆ ಮೂಲಕ ಪರಿಹರಿಸಬೇಕು ಎಂಬುದಕ್ಕೆ ಸಮ್ಮತಿಸಿದ್ದೇವೆ’ ಎಂದು ಮೋದಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!