ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನ ಸೂರತ್ ಜಿಲ್ಲೆಯ ಕಕ್ರಾಪರ್ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಒಟ್ಟು 1,400 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಹೊಸ ಪಿಎಚ್‌ಡಬ್ಲ್ಯುಆರ್‌ಗಳನ್ನು ಪ್ರಧಾನಿ ಮೋದಿ ಇಂದು ಉದ್ಘಾಟಿಸಲಿದ್ದಾರೆ. ಗುಜರಾತ್ ಪ್ರವಾಸದಲ್ಲಿ ಬರೋಬ್ಬರಿ 60,000 ಕೋಟಿ ರೂಪಾಯಿಗಳ ವಿವಿಧ ಯೋಜನೆಗಳನ್ನು ‘ನಮೋ’ ಉದ್ಘಾಟಿಸಲಿದ್ದಾರೆ.
ಪಿಐಬಿ ಹೇಳಿಕೆಯ ಪ್ರಕಾರ, ಕಕ್ರಾಪರ್ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಎರಡು ಹೊಸ ವಿದ್ಯುತ್ ಘಟಕಗಳನ್ನು ನಿರ್ಮಿಸಲಾಗಿದೆ. ಭಾರತೀಯ ಪರಮಾಣು ಶಕ್ತಿ ನಿಗಮವು (NPCIL) ಇಂದು KAPS-3 ಮತ್ತು KAPS-4 ಯೋಜನೆಗಳನ್ನು ಉದ್ಘಾಟಿಸಲಿದ್ದು, ಇದರ ನಿರ್ಮಾಣ ವೆಚ್ಚ 22,500 ಕೋಟಿ ರೂ. ಇರಲಿದೆ ಎನ್ನಲಾಗಿದೆ.