ಯಾವಾಗ್ಲಾದ್ರೂ ಇದ್ದಕ್ಕಿದ್ದ ಹಾಗೇ ವಿಷಯಗಳು ಮರೆತುಹೋಗತ್ತಾ? ಒಲೆ ಮೇಲೆ ಹಾಲಿಟ್ಟು ಮರೆಯೋದು, ಪ್ರಾಜೆಕ್ಟ್ ಡೆಡ್ಲೈನ್ ಮರೆಯೋದು, ದೋಸೆಗೆ ನೆನ್ಸಿ ರುಬ್ಬೋಕೆ ಮರೆಯೋದು, ಹಾಗೆ ಗಾಡಿ ತಳ್ಕೊಂಡು ಬಂದಿದ್ರೂ ಪೆಟ್ರೋಲ್ ಇಲ್ಲ ಅನ್ನೋದು ಮರೆಯೋದು..
ಕೆಲವೊಮ್ಮೆ ಪಕ್ಕಾ ಕ್ಲಾರಿಟಿ ಇದ್ರೂ ಕನ್ಫ್ಯೂಷನ್, ಫೋಕಸ್ ಮಾಡೋಕೆ ಆಗ್ತಿಲ್ಲ. ಯಾವುದೇ ಜಡ್ಜ್ಮೆಂಟ್ ತೆಗೆದುಕೊಳ್ಳೋಕೆ ಆಗ್ತಿಲ್ಲ.. ಹೀಗೆಲ್ಲ ಆಗ್ತಿದ್ಯಾ?
ಹಾಗಿದ್ರೆ ಇದು ಬ್ರೇನ್ ಫಾಗ್ ಸಿಂಡ್ರೋಮ್ ಇರಬಹುದು. ಈ ಸಮಸ್ಯೆ ಬಾಧಿಸಿದವರಿಗೆ ಗೊಂದಲ, ಮರೆವು, ಫೋಕಸ್ ಇಲ್ಲದಿರುವುದು ಇನ್ನಿತರ ಸಮಸ್ಯೆಗಳು ಬಾಧಿಸುತ್ತವೆ.
ಬ್ರೇನ್ ಫಾಗ್ಗೆ ಕಾರಣಗಳೇನು?
ಅತಿಯಾದ ಒತ್ತಡ
ಕಡಿಮೆ ನಿದ್ದೆ
ಹಾರ್ಮೋನ್ಗಳ ಬದಲಾವಣೆ
ಸರಿಯಾದ ಡಯಟ್ ಇಲ್ಲದಿರುವುದು
ಏನು ಮಾಡಬಹುದು?
ದಿನಕ್ಕೆ 8-9 ಗಂಟೆ ನಿದ್ದೆ
ಒತ್ತಡ ನಿವಾರಣೆ, ಆಗಾಗ ಇಷ್ಟದ ಕೆಲಸ ಮಾಡುವುದು
ಕಾಫಿ ಆಲ್ಕೋಹಾಲ್ ಸೇವನೆ ನಿಲ್ಲಿಸಿ
ವ್ಯಾಯಾಮ ಮಾಡಿ
ಮೆದುಳಿಗೆ ಸಂಬಂಧಿಸಿದ ಆಟಗಳನ್ನು ಆಡಿ
ಪ್ರೋಟೀನ್ಯುಕ್ತ ಆಹಾರ ಸೇವನೆ ಮಾಡಿ