ಬೆಂಗಳೂರಿನ ಪ್ಲಾಸ್ಟಿಕ್‌ ಗೋಡೌನ್‌ ನಲ್ಲಿ ಬೆಂಕಿ ಅವಘಡ: ಆಟೋ, ವಾಹನಗಳು ಸುಟ್ಟು ಭಸ್ಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು. ನಾಯಂಡಹಳ್ಳಿಯ ಗಂಗೋಂಡನಹಳ್ಳಿ ಬಳಿ ಇರುವ ಪ್ಲಾಸ್ಟಿಕ್ ಗೋಡೌನ್ಗೆ ಬೆಂಕಿ ಹೊತ್ತಿಕೊಂಡಿದೆ.

ಬೆಂಕಿಯ ತೀವ್ರತೆಗೆ ಮೂವತ್ತಕ್ಕೂ ಹೆಚ್ಚು ಆಟೋಗಳು ಮತ್ತು ಟ್ರಕ್‌ಗಳು ಸುಟ್ಟು ಭಸ್ಮವಾಗಿವೆ. ಬೆಂಕಿ ಅಕ್ಕಪಕ್ಕದ ಗ್ರಾಮಗಳಿಗೂ ವ್ಯಾಪಿಸುವ ಸಾಧ್ಯತೆಯಿರುವುದರಿಂದ ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಿಜ್ವಾನ್ ಒಡೆತನದ ಆಸ್ತಿಯ ಖಾಲಿ ಭಾಗದಲ್ಲಿ ವಾಹನಗಳನ್ನು ನಿಲ್ಲಿಸಲಾಗಿತ್ತು. ಈ ಕಾರಣಕ್ಕೆ ವಾಹನಗಳು ಸುಟ್ಟು ಕರಕಲಾಗಿವೆ. ಸಮೀಪದಲ್ಲೇ ಹತ್ತಾರು ಪ್ಲಾಸ್ಟಿಕ್ ಗೋಡೌನ್ ಇದ್ದು, ಅಗ್ನಿಶಾಮಕ ದಳದ ಅಧಿಕಾರಿಗಳು ಕೂಡಲೇ ಬೆಂಕಿಯನ್ನು ನಂದಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!