ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಗೆ ಎಎಪಿ ಪಕ್ಷವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರೆ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಬಹುದು ಎಂದು ದೆಹಲಿ ಸಚಿವೆ ಅತಿಶಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಎಎಪಿ-ಕಾಂಗ್ರೆಸ್ ಸಹಭಾಗಿತ್ವ ಅಂತಿಮ ಹಂತ ತಲುಪಿದೆ ಎಂಬ ಸುದ್ದಿ ಬಂದಿದೆ. ಈ ಹಿನ್ನೆಲೆಯಲ್ಲಿ ಎಎಪಿ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದರೆ ಕೇಜ್ರಿವಾಲ್ ಅವರನ್ನು ಬಂಧಿಸಲಾಗುವುದು ಎಂಬ ಸಂದೇಶವನ್ನು ಆಪ್ ನಾಯಕರಿಗೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ.
ಶನಿವಾರ ಅಥವಾ ಭಾನುವಾರದಂದು ಸಿಬಿಐನಿಂದ ಕೇಜ್ರಿವಾಲ್ಗೆ ನೋಟಿಸ್ ನೀಡಲಿದ್ದು, ನಂತರ ಅವರನ್ನು ಬಂಧಿಸಲಾಗುವುದು ಎಂಬ ಸಂದೇಶ ಹರಿದಾಡುತ್ತಿವೆ ಎಂದು ಸಚಿವೆ ಅತಿಶಿ ಕಳವಳ ವ್ಯಕ್ತಪಡಿಸಿದರು.